ಲಂಡನ್ :15 ವರ್ಷಗಳ ನಂತರ ಪಾಕಿಸ್ತಾನಕ್ಕೆ ಕೈಗೊಳ್ಳುತ್ತಿರುವ ಇಂಗ್ಲೆಂಡ್ ತಂಡದ ಪ್ರವಾಸವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ವರೆಗೆ (2021) ಮುಂದೂಡಲು ಚಿಂತನೆ ನಡೆಸಲಾಗುತ್ತಿದೆ.
ವೆಚ್ಚ ಮತ್ತು ಮೈದಾನದ ಲಭ್ಯತೆಯ ಆಧಾರದ ಮೇಲೆ ಯೋಜನೆಗಳನ್ನು ಕೈಬಿಟ್ಟ ನಂತರ ಜನವರಿ ಕೊನೆಯಲ್ಲಿ ನಡೆಯಬೇಕಿದ್ದ ಸರಣಿಯನ್ನು ಮುಂದಕ್ಕೆ ಹಾಕಲಾಗಿದೆ.
ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಬಿಗ್ ಬ್ಯಾಷ್ ಲೀಗ್ನಲ್ಲಿ (ಬಿಬಿಎಲ್) ಭಾಗವಹಿಸಲು ಸಜ್ಜಾಗುತ್ತಿರುವ ಮತ್ತು ಜನವರಿಯಲ್ಲಿ ಇಂಗ್ಲೆಂಡ್‌ಗೆ ಶ್ರೀಲಂಕಾ ಮತ್ತು ಭಾರತದಲ್ಲಿ ಟೆಸ್ಟ್ ಸರಣಿಗಳನ್ನು ನಿಗದಿಪಡಿಸಿದೆ.
ಆದರೂ ಪಾಕಿಸ್ತಾನ ತಂಡಕ್ಕೆ ಸಮನಾದ ಇಂಗ್ಲೆಂಡ್ ಸಿ ತಂಡವನ್ನು ಕಳುಹಿಸುವ ನಿರೀಕ್ಷೆಯಿದೆ. ಒಂದು ವೇಳೆ ಕಳುಹಿಸಲು ಸಾಧ್ಯವಾಗದಿದ್ದಲ್ಲಿ ಸರಣಿ ಮುಂದೂಡೋಣ ಎಂದು ಈ ಕುರಿತು ಎರಡೂ ಕ್ರಿಕೆಟ್ ಮಂಡಳಿಗಳು ಒಪ್ಪಿಗೆ ಸೂಚಿಸಿವೆ.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು 2 ಟಿ-20 ಸರಣಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಗೆದ್ದರೆ, ಟಿ20 ಸರಣಿ 1-1ರಿಂದ ಸಮಬಲಗೊಂಡಿತ್ತು.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆಯಾಗಿ ಎರಡೂ ಕಡೆಯವರು ಮುಂದೂಡಿದ ಪ್ರವಾಸವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಆದರೆ, ನಿಖರವಾದ ದಿನಾಂಕಗಳನ್ನು ಇನ್ನೂ ದೃಢಪಡಿಸಿಲ್ಲ. ಆದರೂ ಸೆಪ್ಟೆಂಬರ್ ಅಂತ್ಯದೊಳಗೆ ಸರಣಿಯನ್ನು ಮುಗಿಸಲು ಯೋಜನೆ ರೂಪಿಸಲಾಗುತ್ತಿದೆ.
2005ರ ಚಳಿಗಾಲದಲ್ಲಿ ಮೈಕೆಲ್ ವಾ ಅವರ ತಂಡ ಭೇಟಿ ನೀಡಿದ ಬಳಿಕ ಇಂಗ್ಲೆಂಡ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ. 2022ರ ಉತ್ತರಾರ್ಧದಲ್ಲಿ ಅವರು ಈಗಾಗಲೇ ಟೆಸ್ಟ್ ಸರಣಿಯನ್ನು ಆಡಲು ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಪಿಸಿಬಿ ಪ್ರವಾಸ ಕೈಗೊಳ್ಳುವ ಇಚ್ಚೆ ವ್ಯಕ್ತಪಡಿಸಿದೆ.