ಲಂಡನ್: ಎರಡನೇ ಟೆಸ್ಟ್ನ ಕೊನೆಯ ದಿನ ಮೊಹಮ್ಮದ್ ಶಮಿ ಅರ್ಧಶತಕ ಸಿಡಿಸುವ ಮೂಲಕ ಸೋಲುವ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಚೇತರಿಕೆ ತಂದುಕೊಟ್ಟಿದ್ದಲ್ಲದೇ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದಾರೆ.
ನಾಲ್ಕನೇ ದಿನ 6 ವಿಕೆಟ್ ಕಳೆದುಕೊಂಡು 181ರನ್ಗಳಿಸಿದ್ದ ಭಾರತ ತಂಡ ಇಂದು 298 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಶಮಿ 56 ಮತ್ತು ಬುಮ್ರಾ 34 ರನ್ಗಳಿಸಿ 272ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ಕಾರಣರಾದರು.
ಇನ್ನು 5ನೇ ಬ್ಯಾಟಿಂಗ್ ಆರಂಭಿಸಿದ ಭಾರತ ಕೇವಲ 13 ರನ್ಗಳಿಸುವಷ್ಟರಲ್ಲಿ ಆಪತ್ಪಾಂಧವನಾಗಿದ್ದ ರಿಷಭ್ ಪಂತ್(22) ವಿಕೆಟ್ ಕಳೆದುಕೊಂಡಿತು. ಅವರು ರಾಬಿನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಿನ್ನೆ 4 ರನ್ಗಳಿಸಿ ಔಟಾಗದೇ ಉಳಿದಿದ್ದ ಇಶಾಂತ್ ಶರ್ಮಾ 16 ರನ್ಗಳಿಸಿ ರಾಬಿನ್ಸನ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.