ಮುಂಬೈ:ವಿರಾಟ್ ಕೊಹ್ಲಿ ಕೊರತೆಯ ಹೊರತಾಗಿಯೂ ಅಜಿಂಕ್ಯ ರಹಾನೆ ಭಾರತ ತಂಡವನ್ನು ತನ್ನ ನಿಯಂತ್ರಿತ ಹಾಗೂ ಆಕ್ರಮಣಶೀಲತೆಯುಳ್ಳ ಆಟದಿಂದ ಮುನ್ನಡೆಸುವಲ್ಲಿ ಸಮರ್ಥನಾಗಿರಬೇಕು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೆಲವು ಸಲಹೆ ನೀಡಿದ್ದಾರೆ.
ನಾಳೆಯಿಂದ (ಡಿ.17 ರಿಂದ) ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್ ಆಡಲಿದ್ದು ಇದಕ್ಕೂ ಮುನ್ನ ಅಜಿಂಕ್ಯ ರಹಾನೆ ಅವರೊಂದಿಗೆ ಸಂವಹನ ನಡೆಸಿದ ಮಾಸ್ಟರ್ ಬ್ಲಾಸ್ಟರ್, ಅಜಿಂಕ್ಯ ರಹಾನೆ ಸ್ಮಾರ್ಟ್ ಸಾಮರ್ಥ್ಯ ಹೊಂದಿರುವ ಆಟಗಾರ ಎಂದು ನನಗೆ ಗೊತ್ತು. ಎಲ್ಲ ರೀತಿಯ ತಯಾರಿ ಜೊತೆಗೆ ಸಮತೋಲನದಲ್ಲಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಹಾಗಾಗಿ ಅವರ ಮೇಲೆ ಭರವಸೆ ಇದೆ ಎಂದಿದ್ದಾರೆ.
ಅಡಿಲೇಡ್‌ನಲ್ಲಿ ಸ್ಟ್ರೇಲಿಯಾ ವಿರುದ್ಧ ಡೇ/ನೈಟ್ ನಾಲ್ಕು ಟೆಸ್ಟ್ಗಳು ನಡೆಯಲಿವೆ. ಮೊಲದ ಟೆಸ್ಟ್ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮುನ್ನಡೆಯಲಿದ್ದು, ಉಳಿದ ಮೂರು ಟೆಸ್ಟ್ ಪಂದ್ಯ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಹೀಗಾಗಿ ರಹಾನೆ ಮೇಲೆ ಕಾತುರತೆ ಹೆಚ್ಚಾಗಿದೆ.
ಅಜಿಂಕ್ಯ ರಹಾನೆ ಮತ್ತು ಸಚಿನ್ ತೆಂಡೂಲ್ಕರ್ ಅಜಿಂಕ್ಯ ರಹಾನೆ ಆಕ್ರಮಣಕಾರಿ ಆಟಗಾರ ಅನ್ನುವುದರಲ್ಲಿ ಅನುಮಾನವಿಲ್ಲ. ನಾನು ಅವನೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಅವನು ಕಷ್ಟಪಟ್ಟು ಕೆಲಸ ಮಾಡುವ ಹುಡುಗ. ಎಂತಹುದ್ದೇ ಒತ್ತಡ ಇದ್ದರೂ ಅದನ್ನು ಸಲೀಸಾಗಿ ಪರಿಹಾರ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಕ್ರಿಕೆಟಿಗ. ಅವನು ಆಕ್ರಮಣಕಾರಿಯಾದರೂ ಆಕ್ರಮಣಶೀಲತೆಯನ್ನು ನಿಯಂತ್ರಿಸಬಲ್ಲನು ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ : ಲಾಲಾರಸ ಬಳಕೆ ನಿಷೇಧದಿಂದ ಬೌಲರ್ಗಳು ಅಂಗವಿಕಲರಾಗಿದ್ದಾರೆ: ಸಚಿನ್ ತೆಂಡೂಲ್ಕರ್
ಅಜಿಂಕ್ಯ ರಹಾನೆ ಯಾವುದನ್ನೂ ಅಷ್ಟು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಿಮ್ಮ ಪ್ರಾಮಾಣಿಕತೆಯ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಬರುವುದು ಶತಸಿದ್ಧ. ತಂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಫಲಿತಾಂಶದತ್ತ ಗಮನ ಹರಿಸಬೇಡಿ. ಆಟದತ್ತ ಗಮನಹರಿಸಿ. ಫಲಿತಾಂಶಗಳು ನಿಮ್ಮನ್ನು ಅನುಸರಿಸುತ್ತವೆ ಎಂದು ಸಲಹೆ ನೀಡಿದರು.