ಢಾಕಾ: ಮೆಹದಿ ಹಸನ್ ಬಿಗಿ ಬೌಲಿಂಗ್ ದಾಳಿ (25/4) ಮತ್ತು ಶಕೀಲ್ ಹಲ್ ಹಸನ್ (43*ರನ್, 30/2) ಆಲ್ರೌಂಡರ್ ಆಟದಿಂದಾಗಿ ಅಲ್ಪ ಮೊತ್ತಕ್ಕೆ ಕುಸಿದ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದ ಸೋಲನುಭವಿಸಿದೆ.
ಇದನ್ನೂ ಓದಿ...ಆಸೀಸ್ ನೆಲದಲ್ಲಿ ಚರಿತ್ರೆ ಸೃಷ್ಟಿಸಿರುವ ಯುವಪಡೆಯ ಸಾಧನೆ ಅಸಾಮಾನ್ಯ: WWE ಟ್ರಿಪಲ್
ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವ ಮುನ್ನವೇ ಬಾಂಗ್ಲಾ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ 43.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 148 ರನ್ ಗಳಿಸಷ್ಟೇ ಶಕ್ತವಾಯಿತು.
ತಂಡದ ಪರ ರಾವ್ಮನ್ ಪೋವೆಲ್ (41) ಹೊರತುಪಡಿಸಿದರೆ ಉಳಿದವರು ರನ್ ಗಳಿಸಲು ಹರಸಾಹಸಪಟ್ಟರು. ಸುನಿಲ್ ಅಂಬ್ರಿಸ್ (6), ಓಟ್ಲೆ (24), ಸಿಲ್ವಾ (5), ಮೆಕಾಥಿ (3), ಜೇನಸ್ ಮೊಹಮ್ಮದ್ (11) ಸೇರಿದಂತೆ ಎಲ್ಲರೂ ನೀರಸ ಪ್ರದರ್ಶನ ತೋರಿದರು. ಮುಸ್ತಫಿಜರ್ ರೆಹಮಾನ್ಗೆ 2 ವಿಕೆಟ್, ಮೆಹದಿ ಹಸನ್ 4, ಶಕೀಬ್ 2 ಮತ್ತು ಹಸನ್ ಮೊಗಮ್ಮದ್ 1 ವಿಕೆಟ್ ಪಡೆದುಕೊಂಡಿದ್ದಾರೆ.
ಬಾಂಗ್ಲಾ ಕೇವಲ ಮೂರು ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿತು. ಆರಂಭಿಕರಾಗಿ ಕಣಕ್ಕಿಳಿದ ಲಿತ್ತನ್ ದಾಸ್ (22), ತಮೀಮ್ ಇಕ್ಬಾಲ್ (50) ಮತ್ತು ಶಕೀಬ್ ಹಲ್ ಹಸನ್ (43) ಉತ್ತಮ ಪ್ರದರ್ಶನದಿಂದ 33 ಓವರ್ಗಳಲ್ಲಿ ಗೆಲುವಿನ ನಗೆ ಬೀರಿದರು. ಅಕೇಲ್ ಹೊಸೈನ್, ಜೇಸನ್ ಮೊಹಮ್ಮದ್, ರೇಮನ್ ರೈಫರ್ಗೆ ತಲಾ 1 ವಿಕೆಟ್ ಪಡೆದರು.
ಮೆಹದಿ ಹಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮುಂದಿನ ಮತ್ತು ಅಂತಿಮ ಏಕದಿನ ಪಂದ್ಯ ಜನವರಿ 25ರಂದು ನಡೆಯಲಿದೆ. ಅದಾದ ನಂತರ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.