ಢಾಕಾ( ಬಾಂಗ್ಲಾದೇಶ):ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಟೆಸ್ಟ್ನಲ್ಲಿಬಿಗಿ ಬೌಲಿಂಗ್ ದಾಳಿಯಿಂದಾಗಿ ಗುರಿ ನೀಡಲಾಗಿದ್ದ ಅಲ್ಪಮೊತ್ತವನ್ನು ಬೆನ್ನಟ್ಟಲಾಗದೇ ಬಾಂಗ್ಲಾದೇಶವು ವೆಸ್ಟ್ ಇಂಡೀಸ್ ತಂಡದ ಮುಂದೆ ಮಂಡಿಯೂರಿತು. ಈ ಮೂಲಕ ವಿಂಡೀಸ್ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.
ಟೆಸ್ಟ್ನ ಅಂತಿಮ ದಿನದಂದು 231 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆದರಾದರೂ ವಿಂಡೀಸ್ ದಾಳಿಗೆ 213ಗೆ ಧೂಳೀಪಟವಾಯಿತು. ರಕೀಮ್ ಕಾರ್ನವಾಲ್ಗೆ 4 ವಿಕೆಟ್, ಜೋನಲ್ ಮತ್ತು ಕ್ರೆಗ್ ಬ್ರಾಥ್ವೈಟ್ ತಲಾ ಮೂರು ವಿಕೆಟ್ ಪಡೆದು ವಿಂಡೀಸ್ಗೆ ಗೆಲುವಿನ ಕೊಡುಗೆ ನೀಡಿದರು.
ಆರಂಭಿಕ ಆಟಗಾರರಾದ ತಮೀಮ್ ಇಕ್ಬಾಲ್ (50) ಮತ್ತು ಸೌಮ್ಯ ಸರ್ಕಾರ್ (13) ಮೊದಲ ವಿಕೆಟ್ಗೆ 59 ರನ್ಗಳ ಜೊತೆಯಾಟ ನೀಡಿದರು. ನಜ್ಮಲ್ ಹೊಸೈನ್ ಶಾಂಟೋ (11), ಮೊಮಿನುಲ್ ಹಕ್ (26), ಮುಷ್ಫಿಕರ್ ರಹೀಂ (14), ಮೊಹಮ್ಮದ್ ಮಿಥನ್ (10) ಸೇರಿದಂತೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಒಂಬತ್ತು ವಿಕೆಟ್ ಪಡೆದ ರಕೀಮ್ ಕಾರ್ನ್ವಾಲ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಎರಡು ಪಂದ್ಯಗಳ ಸರಣಿಯಲ್ಲಿ 231 ರನ್ ಗಳಿಸಿದ್ದಕ್ಕಾಗಿ ಬೊನ್ನರ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.