ಅಡಿಲೇಡ್:ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತೀಯ ಬ್ಯಾಟ್ಸಮನ್ಗಳನ್ನು ಸೊನ್ನೆಗೆ ಸುತ್ತಿಸುವಲ್ಲಿ ಬಲ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ದಾಖಲೆ ಬರೆದಿದೆ.
ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ 36 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 90 ರನ್ ಗುರಿ ನೀಡಿತ್ತು. ಕನಿಷ್ಠ ಮೊತ್ತದ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ 93 ರನ್ ಗಳಿಸಿ ಸಲೀಸಾಗಿ ಗೆಲುವಿನ ದಡ ಸೇರಿತು. ಆ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಎರಡೂವರೆ ದಿನಗಳಲ್ಲಿ 8 ವಿಕೆಟ್‌ಗಳ ಜಯ ದಾಖಲಿಸಿದೆ.
ಇಂದಿನ ಟೆಸ್ಟ್ ಸೋಲು ಇತಿಹಾಸದ ಕರಾಳ ಪುಟಗಳಿಗೆ ಸೇರಿದೆ. ಎರಡನೇ ದಿನದಾಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 9 ರನ್ಗಳಿಸಿದ್ದ ಭಾರತ ಮೂರನೇ ದಿನದ ಆರಂಭದಿಂದಲೇ ಕಳಪೆ ಪ್ರದರ್ಶನ ನೀಡಿತು. ಪ್ಯಾಟ್ ಕಮ್ಮಿನ್ಸ್ ಮತ್ತು ಹೆಜಲ್ವುಡ್ ಮಾರಕ ಬೌಲಿಂಗ್ ದಾಳಿಗೆ ಕ್ರೀಸ್ನಲ್ಲಿ ನಿಲ್ಲಲಾಗದೇ ಪೆವಿಲಿಯನ್ ಕಡೆ ತೆರಳಿದರು.
ಇದನ್ನೂ ಓದಿ : ಮೊದಲ ಟೆಸ್ಟ್ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಆಸ್ಟ್ರೇಲಿಯಾಗೆ 8 ವಿಕೆಟ್‌ಗಳ ಭರ್ಜರಿ ಜಯ
ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 4 ರನ್ಗಳಿಗೆ ಔಟಾದರೆ, ಮಯಾಂಕ್ ಅಗರ್ವಾಲ್ 9 ರನ್ಗಳಿಸಿದ್ದಾರೆ. ಬುಮ್ರಾ 2, ಪೂಜಾರಾ 0, ಕೊಹ್ಲಿ 4, ರಹಾನೆ 0, ವಿಹಾರಿ 8, ಸಹಾ 4, ಅಶ್ವಿನ್ 0 , ಉಮೇಶ್ ಯಾದವ್ 4, ಶಮಿ 1 ರನ್ ಗಳಿಸಿದ್ರು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಗಳಿಸಿತು. 150 ವರ್ಷಗಳ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಟೀಂ ಇಂಡಿಯಾದ ಅತ್ಯಂತ ಕಳಪೆ ಮಟ್ಟದ ಪ್ರದರ್ಶನ ಇದಾಗಿದೆ.
ನ್ಯೂಜಿಲೆಂಡ್ ತಂಡ 1955 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 26 ರನ್‌ಗಳನ್ನು ನೀಡುವ ಮೂಲಕ ದಾಖಲೆ ಬರೆದಿತ್ತು.
ಇನ್ನಿಂಗ್ಸ್‌ವೊಂದರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಮೊತ್ತ ಹೊಂದಿದ ದೇಶಗಳ ಪಟ್ಟಿ ಹೀಗಿದೆ
- ನ್ಯೂಜಿಲ್ಯಾಂಡ್ 26, (ಇಂಗ್ಲೆಂಡ್ ವಿರುದ್ಧ) ಆಕ್ಲೆಂಡ್, 1955
- ದ.ಆಫ್ರಿಕಾ 30 (ಇಂಗ್ಲೆಂಡ್ ವಿರುದ್ಧ), ಪೋರ್ಟ್ ಎಲಿಜಬೆತ್, 1896
- ದ. ಆಫ್ರಿಕಾ 30 (ಇಂಗ್ಲೆಂಡ್ ವಿರುದ್ಧ) ಎಡ್ಜ್‌ಬಾಸ್ಟನ್, 1924
- ದ.ಆಫ್ರಿಕಾ 35 (ಇಂಗ್ಲೆಂಡ್ ವಿರುದ್ಧ) ಕೇಪ್‌ಟೌನ್, 1899
- ಆಸ್ಟ್ರೇಲಿಯಾ 36 (ಇಂಗ್ಲೆಂಡ್ ವಿರುದ್ಧ) ಎಡ್ಜ್‌ಬಾಸ್ಟನ್, 1902
- ದ.ಆಫ್ರಿಕಾ 36 (ಆಸ್ಟ್ರೇಲಿಯಾ ವಿರುದ್ಧ) ಮೆಲ್ಬೋರ್ನ್, 1932
- ಭಾರತ 36 ( ಆಸ್ಟ್ರೇಲಿಯಾ ವಿರುದ್ಧ) ಅಡಿಲೇಡ್, 2020
- ಐರ್ಲೆಂಡ್ 38 ( ಇಂಗ್ಲೆಂಡ್ ವಿರುದ್ಧ) ಲಾರ್ಡ್ಸ್, 2019
ಇನ್ನಿಂಗ್ಸ್‌ನಲ್ಲಿ ಎರಡಂಕಿ ದಾಟದ ಬ್ಯಾಟ್ಸಮನ್ಗಳು:
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಯಾವ ಬ್ಯಾಟ್ಸ್‌ಮನ್ ಎರಡಂಕಿಯನ್ನು ತಲುಪಿರಲಿಲ್ಲ. ಇದು ಟೆಸ್ಟ್ ಕ್ರಿಕೆಟ್‌ನ ಎರಡನೇ ದೃಷ್ಟಾಂತವಾಗಿದೆ. ಟೀಮ್ ಇಂಡಿಯಾ ಪರ ಮಯಾಂಕ್ ಅಗರವಾಲ್ ಗರಿಷ್ಠ 9 ರನ್ ಗಳಿಸಿದ್ದರು. ಈ ಹಿಂದೆ 1924ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾವು ಇಂಗ್ಲೆಂಡ್ ವಿರುದ್ಧ ಕೇವಲ 30 ರನ್ಗೆ ಆಲೌಟ್ ಆಗಿತ್ತು. ಅಂದು ಹೆಬ್ರಿ ಟೇಲರ್ ಗರಿಷ್ಠ 7 ರನ್ ಗಳಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿ ಕನಿಷ್ಠ ಮೊತ್ತ
- 36, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020*
- 42, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 1974
- 58, ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 1947
- 58, ಇಂಗ್ಲೆಂಡ್ ವಿರುದ್ಧ, ಮ್ಯಾಚೆಂಸ್ಟರ್ 1952
- 66, ಆಸ್ಟ್ರೇಲಿಯಾ ವಿರುದ್ಧ, ಡರ್ಬನ್, 1996
- 67, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್, 1948
6 ವಿಕೆಟ್‌ನ ಪತನಕ್ಕೆ ಕಡಿಮೆ ಸ್ಕೋರ್‌ಗಳು:
- 19/6 ಆಸ್ಟ್ರೇಲಿಯಾ ವಿರುದ್ಧ - ಅಡಿಲೆಡ್ನಲ್ಲಿ- 2020 *
- 25/6 ದಕ್ಷಿಣ ಆಫ್ರಿಕಾ ವಿರುದ್ಧ - ಡರ್ಬನ್ನಲ್ಲಿ- 1996
- 27/6 ನ್ಯೂಜಿಲ್ಯಾಂಡ್ ವಿರುದ್ಧ - ಹೈದರಾಬಾದ್ನಲ್ಲಿ -1969
- 28/6 ಇಂಗ್ಲೆಂಡ್ ವಿರುದ್ಧ- ಲಾರ್ಡ್ಸ್ನಲ್ಲಿ -1974
5 ವಿಕೆಟ್‌ನ ಪತನದಲ್ಲಿ ಭಾರತಕ್ಕೆ ಕಡಿಮೆ ಸ್ಕೋರ್‌ಗಳು:
- 6/5 ಇಂಗ್ಲಂಡ್ ವಿರುದ್ಧ- ಓವಲ್ನಲ್ಲಿ- 1952
- 15/5 ನ್ಯೂಜಿಲ್ಯಾಂಡ್ ವಿರುದ್ಧ - ಅಹಮದಾಬಾದ್ನಲ್ಲಿ- 2010
- 15/5 ಆಸ್ಟ್ರೇಲಿಯಾ ವಿರುದ್ಧ- ಅಡಿಲೇಡ್ನಲ್ಲಿ- 2020 *
- 17/5 ಇಂಗ್ಲಂಡ್ ವಿರುದ್ಧ- ಮ್ಯಾಂಚೆಸ್ಟರ್ನಲ್ಲಿ 1952