ಅಡಿಲೇಡ್: ಗುಲಾಬಿ ಬಣ್ಣದ ಚೆಂಡನ್ನು ದೀಪಗಳ ಅಡಿಯಲ್ಲಿ ನೋಡುವುದು ಅಷ್ಟು ಸುಲಭವಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಿಂಕ್ ಬೌಲಿಂಗ್ ಸಾಧಾರಣ ಟೆಸ್ಟ್ ಬಾಲ್ನಂತೆ ಇರುವುದಿಲ್ಲ. ಈ ಬೌಲಿಂಗ್ ಎದುರಿಸುವುದು ಖಂಡಿತವಾಗಿಯೂ ಅಷ್ಟು ಸುಲಭವಲ್ಲ. ಕ್ರೀಸ್ನಲ್ಲಿ ಪಿಂಕ್ ಬಾಲ್ಗೆ ಹೊಂದಿಕೊಳ್ಳಬೇಕೆಂದರೆ ಬ್ಯಾಟ್ಸಮನ್ ಸಮಯ ತೆಗೆದುಕೊಳ್ಳುತ್ತಾನೆ. ಹೀಗಾಗಿ, ಬ್ಯಾಟಿಂಗ್ ಮಾಡುವುದು ಅಷ್ಟೊಂದು ಸರಳವಾಗಿ ಇರಲಿಲ್ಲ. ಕೆಲವು ಬ್ಯಾಟ್ಸ್ಮನ್ಗಳು ಅತ್ಯುತ್ತಮ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ದಿನದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಫೈನ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಖಂಡಿತವಾಗಿಯೂ ಇದು ನಮ್ಮ ಅತ್ಯುತ್ತಮ ಪ್ರದರ್ಶನವಲ್ಲ. ಆದರೆ, ಆಕ್ರಮಣಕಾರಿ ಬೌಲಿಂಗ್ ಗುಣಮಟ್ಟವನ್ನು ಹೊಂದಿರುವ ಆಸ್ಟ್ರೇಲಿಯಾ ಪುನರಾಗಮನ ಮಾಡಲು ಖಂಡಿತವಾಗಿಯೂ ಪ್ರಯತ್ನಿಸುತ್ತದೆ ಎಂದಿದ್ದಾರೆ. ಭಾರತ ತಂಡದ ಬೌರಲ್ಗಳ ಆಕ್ರಮಣಕಾರಿಯುತ ಬೌಲಿಂಗ್ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದೆ. ಉತ್ತಮ ಪ್ರದರ್ಶ ತೋರಲು ನಮಗೆ ಸಾಧ್ಯವಾಗಲಿಲ್ಲ. ಒತ್ತಡದ ನಡುವೆ ನಮ್ಮ ತಂಡ ಉತ್ತಮ ಸ್ಥಿತಿಯಲ್ಲಿದೆ ಎಂದಿದ್ದಾರೆ.