ಅಬುಧಾಬಿ [ಯುಎಇ]: ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಯಲ್ಲಿ ಮೂರನೇ ಪಂದ್ಯ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ಸರಣಿ ವಶ ಪಡಿಸಿಕೊಂಡಿದ್ದು, ಈ ಗೆಲುವಿನ ಮೂಲಕ ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ.
ನಾಯಕನಾಗಿ ಅತಿ ಹೆಚ್ಚು ಟಿ-20 ಪಂದ್ಯಗಳನ್ನು ಗೆದ್ದ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನ ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ಸರಿಗಟ್ಟಿದ್ದಾರೆ. ಧೋನಿ 72 ಅಂತರಾಷ್ಟ್ರೀಯಾ ಟಿ-20 ಪಂದ್ಯಗಳಲ್ಲಿ 41 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲವು ಸಾಧಿಸಿದೆ. ಅಫ್ಘಾನ್ ನಾಯಕ ಅಸ್ಗರ್ ಅಫ್ಘನ್ ನಾಯಕನಾಗಿ 41 ಅಂತಾರಾಷ್ಟ್ರೀಯಾ ಟಿ-20 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಧೋನಿ ದಾಖಲೆ ಸರಿಗಟ್ಟಿದ್ದಾರೆ.