ಲಂಡನ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಆ್ಯಶಸ್ 2023 ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ವಿಕೆಟ್ ಉರುಳಿಸಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವಿಭಿನ್ನ ಫೀಲ್ಡಿಂಗ್ ಸೆಟ್ ಮಾಡಿದ್ದರು. ಆಸ್ಟ್ರೇಲಿಯಾ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಏಕಾಂಗಿಯಾಗಿ ಶತಕ ಬಾರಿಸಿದ ಉಸ್ಮಾನ್ ಖವಾಜಾ ಆಂಗ್ಲ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೊದಲ ದಿನದ ಅಂತ್ಯಕ್ಕೆ ಕ್ರೀಸ್ಗಿಳಿದ ಖವಾಜಾ ಮೂರನೇ ದಿನವೂ ಆಟ ಮುಂದುವರೆಸಿದ್ದರು. ಇಂಗ್ಲೆಂಡ್ಗೆ ತಲೆನೋವಾಗಿದ್ದ ಖವಾಜಾ ವಿಕೆಟ್ ಕಬಳಿಸಲು ಆಕ್ರಮಣಕಾರಿ ಫೀಲ್ಡಿಂಗ್ ಸೆಟ್ ಮಾಡುವ ಮೂಲಕ ಸ್ಟೋಕ್ಸ್ ಕೊನೆಗೂ ಯಶಸ್ಸು ಕಂಡರು.
ನಾಲ್ಕು ಸೆಷನ್ ಬ್ಯಾಟಿಂಗ್ ಮಾಡಿದ ಖವಾಜಾ ತಮ್ಮ 15ನೇ ಟೆಸ್ಟ್ ಶತಕ ಪೂರೈಸಿದರು. ಹೀಗಾಗಿ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಿದ್ದರು. 43.92 ಸ್ಟ್ರೈಕ್ ರೇಟ್‌ನಲ್ಲಿ 321 ಎಸೆತಗಳನ್ನು ಎದುರಿಸಿ 141 ರನ್ ಗಳಿಸಿದ ಎಡಗೈ ಬ್ಯಾಟರ್ ಆಂಗ್ಲರ ಏಳು ಮಂದಿ ಬೌಲರ್ಗಳನ್ನು ಯಶಸ್ವಿಯಾಗಿ ಎದುರಿಸಿದರು. ಇಂಗ್ಲೆಂಡ್ನಲ್ಲಿ ಖವಾಜಾ ಗಳಿಸಿದ ಮೊದಲ ಶತಕ ಇದಾಗಿದೆ.
2ನೇ ದಿನದಂದು 150 ರನ್ ಗಡಿ ದಾಟುವ ಮುನ್ನವೇ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಆಸ್ಟ್ರೇಲಿಯಾದ ತಂಡಕ್ಕೆ ಆಂಗ್ಲರ ಮೊದಲ ಇನ್ನಿಂಗ್ಸ್ 393 ರನ್ಗೆ ತಿರುಗೇಟು ನೀಡಲು ದೊಡ್ಡ ಇನ್ನಿಂಗ್ಸ್ವೊಂದರ ಅಗತ್ಯವಿತ್ತು. ಆರಂಭಿಕರಾಗಿ ಕಣಕ್ಕಿಳಿದ ಖವಾಜಾ ಆಸೀಸ್ ಇನ್ನಿಂಗ್ಸ್ಗೆ ಬೆನ್ನೆಲುಬಾಗಿ ನಿಂತು ಶತಕದ ನಗೆ ಬೀರಿದರು.