ಕರ್ನಾಟಕ

karnataka

ETV Bharat / sports

ಮಹಿಳಾ ವಿಶ್ವಕಪ್​: ಪಾಕಿಸ್ತಾನ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿ ಮಿಥಾಲಿ ಪಡೆ

2005 ಮತ್ತು 2017ರ ವಿಶ್ವಕಪ್​​ನ ರನ್ನರ್​ ಅಪ್ ಆಗಿರುವ ಭಾರತ ಮಹಿಳಾ ತಂಡ ಈ ಬಾರಿ ಅನುಭವಿ ಮತ್ತು ಯುವ ಆಟಗಾರ್ತಿಯರ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಕೊನೆಯ ವಿಶ್ವಕಪ್ ಆಡುತ್ತಿರುವ ದಂತಕಥೆಗಳಾಗ​ ಮಿಥಾಲಿ ರಾಜ್​ ಹಾಗೂ ಜೂಲನ್ ಗೋಸ್ವಾಮಿ ಅವರಿಗಾಗಿ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದೆ.

India Women vs Pakistan Women world cup
ಭಾರತ vs ಪಾಕಿಸ್ತಾನ ಮಹಿಳಾ ವಿಶ್ವಕಪ್

By

Published : Mar 5, 2022, 5:59 PM IST

ಮೌಂಟ್​​ ಮಾಂಗನ್ಯುಯಿ: ಭಾರತ ಮಹಿಳಾ ತಂಡ ನ್ಯೂಜಿಲ್ಯಾಂಡ್​​ನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದ್ದು, ಬೃಹತ್​ ಅಂತರದ ಜಯ ಸಾಧಿಸಿ ತನ್ನ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿದೆ.

2005 ಮತ್ತು 2017ರ ವಿಶ್ವಕಪ್​​ನ ರನ್ನರ್​ ಅಪ್ ಆಗಿರುವ ಭಾರತ ಮಹಿಳಾ ತಂಡ ಈ ಬಾರಿ ಅನುಭವಿ ಮತ್ತು ಯುವ ಆಟಗಾರ್ತಿಯರ ಸಂಯೋಜನೆ ಹೊಂದಿದ್ದು, ಕೊನೆಯ ವಿಶ್ವಕಪ್ ಆಡುತ್ತಿರುವ ಲೆಜೆಂಡ್​ಗಳಾದ​ ಮಿಥಾಲಿ ರಾಜ್​ ಹಾಗೂ ವೇಗಿ ಜೂಲನ್ ಗೋಸ್ವಾಮಿ ಅವರಿಗಾಗಿ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದೆ.

ಮಿಥಾಲಿ ಪಡೆ 2022ರ ವಿಶ್ವಕಪ್​ಗೂ ಮುನ್ನ 12 ತಿಂಗಳಲ್ಲಿ ನಾಲ್ಕು ಬಲಿಷ್ಠ ತಂಡಗಳು ವಿರುದ್ಧ ಸರಣಿಯನ್ನಾಡಿದೆ. ಹಾಲಿ ಚಾಂಪಿಯನ್​ ಆಗಿರುವ ಇಂಗ್ಲೆಂಡ್ ಸೇರಿದಂತೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವ ಮೂಲಕ ತಂಡದ ಸಾಮರ್ಥ್ಯ ಪರೀಕ್ಷೆ ನಡೆಸಿದೆ. ಆದರೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಮೂರು ವಿದೇಶಿ ಪ್ರವಾಸಗಳಲ್ಲೂ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಆದರೂ ತಂಡದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ಮತ್ತು ಯುವ ಆಟಗಾರ್ತಿಯರ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವಿಶ್ವಕಪ್​ನಲ್ಲಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿದೆ.

ಇನ್ನು ಪಾಕಿಸ್ತಾನ ತಂಡದೆದರು ಭಾರತದ ವನಿತೆಯರೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು ಇದುವರೆಗೆ ಆಡಿರುವ ಎಲ್ಲಾ 10 ಏಕದಿನ ಪಂದ್ಯಗಳಲ್ಲೂ ಜಯ ಸಾಧಿಸಿ ಶೇ.100ರ ಗೆಲುವಿನ ಸರಾಸರಿ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಭಾನುವಾರ ವಿಜಯ ಪತಾಕೆಯನ್ನು ಹಾರಿಸುವುದಕ್ಕಾಗಿ ಕಾಯುತ್ತಿದೆ.

ತಂಡದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಮಿಥಾಲಿ ರಾಜ್, ಸ್ಮೃತಿ ಮಂಧಾನ ಜೊತೆಗೆ ಹರ್ಮನ್​ ಪ್ರೀತ್ ಕೌರ್ ಫಾರ್ಮ್​​ಗೆ ಮರಳಿರುವುದು ಭಾರತದ ಬಲವನ್ನು ಹೆಚ್ಚಿಸಿದೆ. ಈ ಮೂವರು ಅನುಭವಿಗಳ ಜೊತೆಗೆ ಯುವ ಬ್ಯಾಟರ್​ಗಳಾದ ಶೆಫಾಲಿ, ರಿಚಾ ಘೋಷ್, ಯಸ್ತಿಕಾ ಭಾಟಿಯಾ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಆಲ್​ರೌಂಡರ್​ ದೀಪ್ತಿ ಶರ್ಮಾ, ಕನ್ನಡತಿ ಗಾಯಕ್ವಾಡ್​ ಹಾಗೂ ಪೂಜಾ ವಸ್ತ್ರಾಕರ್ ಅನುಭವಿ ಜೂಲನ್​ ಗೋಸ್ವಾಮಿಗೆ ಸಾಥ್​ ನೀಡಲಿದ್ದಾರೆ.

ಇನ್ನು ಪಾಕಿಸ್ತಾನ ತಂಡ ಕಳೆದ ಎರಡೂ ವರ್ಷಗಳಿಂದ ಕೋವಿಡ್​ 19 ಹೊಡೆತಕ್ಕೆ ಸಿಲುಕಿ ಕೇವಲ 12 ಪಂದ್ಯಗಳನ್ನಾಡಿದ್ದು, ಗೆಲುವಿನ ಸರಾಸರಿ ತುಂಬಾ ಕಡಿಮೆಯಿದೆ.

ಕಳೆದ ವಿಶ್ವಕಪ್​ ನಂತರ ಆಡಿರುವ 14 ಏಕದಿನ ಪಂದ್ಯದಗಳಲ್ಲಿ 2 ರಲ್ಲಿ ಮಾತ್ರ ಗೆಲುವು ಸಾಧಿಸಿ, ಉಳಿದ 11 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯ ರದ್ಧಾಗಿದೆ. ಪಾಕಿಸ್ತಾನ ತಂಡ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಲ್ಲದಿದ್ದರೂ, ಸೆಮಿಫೈನಲ್ ಪ್ರವೇಶಿಸುವ ಗುರಿಯನ್ನು ಹೊಂದಿದ್ದು, ಕೆಲವು ಟಾಪ್​ ತಂಡಗಳಿಗೆ ಸೋಲುಣಿಸುವ ಗುರಿ ಹೊಂದಿರುವುದಾಗಿ ನಾಯಕಿ ಬಿಸ್ಮಾ ಮರೂಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಹಿಳಾ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ 12 ರನ್​ಗಳ ರೋಚಕ ಜಯ

ABOUT THE AUTHOR

...view details