ಮುಂಬೈ (ಮಹಾರಾಷ್ಟ್ರ):ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಡ್ರಾದತ್ತ ಸಾಗುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿರುವ ಆಸೀಸ್ ವನಿತೆಯರು 46 ರನ್ಗಳ ಮುನ್ನಡೆ ಸಾಧಿಸಿದ್ದಾರೆ. ಭಾನುವಾರ ಒಂದು ದಿನದ ಪಂದ್ಯ ಬಾಕಿ ಇದ್ದು, ಆಸ್ಟ್ರೇಲಿಯಾವನ್ನು ಭಾರತ ಮೊದಲ ಸೆಷನ್ ಮುಕ್ತಾಯಕ್ಕೂ ಮುನ್ನ 100 ರನ್ ಒಳಗೆ ನಿಯಂತ್ರಿಸಿದಲ್ಲಿ ಗೆಲುವಿನ ಸಾಧ್ಯತೆ ಇದೆ. ಇಲ್ಲವಾದಲ್ಲಿ ಪಂದ್ಯ ಡ್ರಾದತ್ತ ಸಾಗಲಿದೆ. ಸದ್ಯ ಕ್ರೀಸ್ನಲ್ಲಿ ಅನ್ನಾಬೆಲ್ ಸದರ್ಲ್ಯಾಂಡ್ (12) ಮತ್ತು ಆಶ್ಲೀ ಗಾರ್ಡ್ನರ್ (7) ಇದ್ದಾರೆ.
ಎರಡನೇ ದಿನದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್ಗೆ 7 ವಿಕೆಟ್ ಕಳೆದುಕೊಂಡು 367 ಕೆಲೆಹಾಕಿತ್ತು. ಶನಿವಾರ ಮೂರನೇ ದಿನದ ಆರಂಭದಲ್ಲೇ ಭಾರತ ಉಳಿದ ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 406 ರನ್ ಕಲೆಹಾಕಿತು. ಎರಡನೇ ದಿನ ದ ಅಂತ್ಯಕ್ಕೆ 70 ರನ್ಗಳಿಸಿ ಅಜೇಯವಾಗಿದ್ದ ದೀಪ್ತಿ ಶರ್ಮಾ ಅದಕ್ಕೆ 8 ರನ್ ಸೇರಿಸಿ ವಿಕೆಟ್ ಕೊಟ್ಟರು. ಪೂಜಾ ವಸ್ತ್ರಾಕರ್ 14 ರನ್ ಸೇರಿಸಿ ಔಟ್ ಆದರು. ಇನ್ನಿಂಗ್ಸ್ ದೀಪ್ತಿ 171 ಬಾಲ್ ಆಡಿ 9 ಬೌಂಡರಿ ಸಹಾಯದಿಂದ 78 ರನ್ ಕಲೆಹಾಕಿದರೆ, ಪೂಜಾ 126 ಬಾಲ್ ಆಡಿ 47 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 219 ರನ್ಗಳಿಸಿ ಆಲ್ಔಟ್ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಸ್ಮೃತಿ ಮಂಧಾನ (74), ಜೆಮಿಮಾ ರಾಡ್ರಿಗಸ್ (73), ರಿಚಾ ಘೋಷ್ (52) ಮತ್ತು ದೀಪ್ತಿ ಶರ್ಮಾ (78) ಅವರ ಅರ್ಧಶತಕದ ನೆರವಿನಿಂದ 406 ರನ್ ಕಲೆಹಾಕಿತು. ಇದರಿಂದ 187 ರನ್ಗಳ ಮುನ್ನಡೆಯನ್ನು ಭಾರತದ ವನಿತೆಯರು ಸಾಧಿಸಿದರು.