ಟ್ರಿನಿಡಾಡ್: ಭಾರತ ಅಂಡರ್ 19 ವಿಶ್ವಕಪ್ ತಂಡದಲ್ಲಿ ಕೋವಿಡ್ಗೆ ತುತ್ತಾಗಿರುವ ಮನವ್ ಪರಾಕ್ ಅವರ ಬದಲೀ ಆಟಗಾರನಾಗಿ ಉತ್ತರ ಪ್ರದೇಶದ ಆಲ್ರೌಂಡರ್ ವಾಸು ವತ್ಸ್ ಭಾರತ ತಂಡ ಸೇರುವುದಕ್ಕೆ ಐಸಿಸಿ ತಾಂತ್ರಿಕ ಸಮಿತಿ ಒಪ್ಪಿಗೆ ಸೂಚಿಸಿದೆ.
ಪರಾಕ್ ಕೋವಿಡ್ ಪಾಸಿಟಿವ್ ಪಡೆದು ಐಸೊಲೇಷನ್ನಲ್ಲಿರುವುದರಿಂದ ವಾಸು ಅವರನ್ನು ಕೇವಲ ತಾತ್ಕಾಲಿಕ ಬದಲೀ ಆಟಗಾರನಾಗಿ ತಂಡ ಸೇರುವುದಕ್ಕೆ ಸಮಿತಿ ಒಪ್ಪಿದೆ.
"ಕೋವಿಡ್ ಬದಲಿ ಆಟಗಾರ ಕೇವಲ ತಾತ್ಕಾಲಿಕವಷ್ಟೇ, ಕೋವಿಡ್ ಪಾಸಿಟಿವ್ ಹೊಂದಿರುವ ಆಟಗಾರ ಚೇತರಿಸಿಕೊಂಡು ತಂಡಕ್ಕೆ ಮರಳಲು ಸಮರ್ಥನಾದರೆ, ಈ ತಾತ್ಕಾಲಿಕ ಆಟಗಾರನ ಜಾಗಕ್ಕೆ ಮರಳಬೇಕು" ಎಂದು ಸಮಿತಿ ಹೇಳಿಕೆ ಬಿಡುಗಡೆ ಮಾಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್ನಲ್ಲಿ ಭಾರತ ತನ್ನ 2ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮುನ್ನ ನಾಯಕ ಯಶ್ ಧುಲ್. ಉಪನಾಯಕ ಶೇಖ್ ರಶೀದ್ ಸೇರಿದಂತೆ 6 ಮಂದಿಗೆ ಕೋವಿಡ್ ದೃಢಪಟ್ಟಿತ್ತು. ಹಾಗಾಗಿ ಉಳಿದ ಎಲ್ಲಾ 11 ಆಟಗಾರರು ಆ ಪಂದ್ಯದಲ್ಲಿ ಆಡಿದ್ದರು.
ಬಿ ಗುಂಪಿನಲ್ಲಿರುವ ಭಾರತ ತನ್ನ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿದೆ. ಶನಿವಾರ ಉಗಾಂಡ ವಿರುದ್ಧ ಕಣಕ್ಕಿಳಿದಿದ್ದು, ಈ ಪಂದ್ಯವನ್ನು ಭಾರತವೇ ಗೆಲ್ಲುವ ಅವಕಾಶ ಹೆಚ್ಚಿದ್ದು, ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಹಾಗಾಗಿ ಕ್ವಾರ್ಟರ್ ಫೈನಲ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: ಐಸಿಸಿ ಅಂಡರ್ 19 ವಿಶ್ವಕಪ್ : ವರುಣನ ಅಬ್ಬರದ ನಡುವೆಯೂ ಐರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ!