ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಭಾರತ ಆಡಿದ್ದ ಆ ಎರಡು ಟೆಸ್ಟ್​ನಲ್ಲಿ ಫಿಕ್ಸಿಂಗ್ ನಡೆದಿಲ್ಲ: ಐಸಿಸಿ - ಆಲ್​ ಜಜೀರಾ

ಕ್ರಿಕೆಟ್​ ಮ್ಯಾಚ್​ ಫಿಕ್ಸರ್ಸ್​ ಎಂಬ ಡಾಕ್ಯುಮೆಂಟರಿಯನ್ನು 2018ರಲ್ಲಿ ಅಲ್​ಜಜೀರ್​ ಬಿಡುಗಡೆ ಮಾಡಿತ್ತು. ಇದರಲ್ಲಿ 2016ರಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವೆ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್​ ಪಂದ್ಯ ಮತ್ತು 2017ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಐಸಿಸಿ
ಐಸಿಸಿ

By

Published : May 17, 2021, 10:18 PM IST

ದುಬೈ: ಇಂಗ್ಲೆಂಡ್ ವಿರುದ್ಧ 2016ರಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಭಾರತ ಆಡಿದ್ದ ಟೆಸ್ಟ್ ಪಂದ್ಯಗಳ ಫಿಕ್ಸಿಂಗ್ ನಡೆದಿತ್ತು ಎಂದು ನ್ಯೂಸ್ ಚಾನೆಲ್ ಅಲ್ ಜಜೀರಾ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಐಸಿಸಿ ಸೋಮವಾರ ದೃಢಪಡಿಸಿದೆ.

ಕ್ರಿಕೆಟ್​ ಮ್ಯಾಚ್​ ಫಿಕ್ಸರ್ಸ್​ ಎಂಬ ಡಾಕ್ಯುಮೆಂಟರಿಯನ್ನು 2018ರಲ್ಲಿ ಅಲ್​ಜಜೀರ್​ ಬಿಡುಗಡೆ ಮಾಡಿತ್ತು. ಇದರಲ್ಲಿ 2016ರಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವೆ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್​ ಪಂದ್ಯ ಮತ್ತು 2017ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಕಾರ್ಯಕ್ರಮದ ಸಮಯದಲ್ಲಿ, ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಎರಡು ಟೆಸ್ಟ್ ಸೇರಿನಲ್ಲಿ ಫಿಕ್ಸಿಂಗ್​ನಲ್ಲಿ ಭಾಗಿಯಾಗಿತ್ತು ಎಂದು ಆಪಾದಿತ ಬುಕ್ಕಿ ಅನೀಲ್ ಮುನ್ನಾವರ್ ಹೇಳಿಕೊಂಡಿದ್ದರು. ಆದರೆ, ಐಸಿಸಿ ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ. ಚಿತ್ರದಲ್ಲಿ ತೋರಿಸಿರುವ ಐದು ವ್ಯಕ್ತಿಗಳ ವರ್ತನೆ ಕೂಡ ಸಂಶಯಾಸ್ಪದವಾಗಿದೆ ಎಂದು ಐಸಿಸಿ ತಿಳಿಸಿ ಆರೋಪವನ್ನು ತಿರಸ್ಕರಿಸಿದರೆ.

ಚಾನೆಲ್​ ಜೊತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಆ ಐದು ವ್ಯಕ್ತಿಗಳ ತಪ್ಪು ಹೇಳಿಕೆ ನೀಡಿ ಪ್ರಶ್ನಾರ್ಹ ರೀತಿಯಲ್ಲಿ ವರ್ತಿಸಿದರೂ, ಅವರ ವಿರುದ್ಧ ವಿಶ್ವಾಸಾರ್ಹ ಸಾಕ್ಷಿಗಳ ಕೊರತೆಯಿಂದ ಕ್ರಮ ಅಥವಾ ಯಾವುದೇ ಶುಲ್ಕ ವಿಧಿಸಲು ಸಾಧ್ಯವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ABOUT THE AUTHOR

...view details