ಮುಂಬೈ:ಇಂಗ್ಲೆಂಡ್ನಿಂದ ವಾಪಸ್ ಆಗಿರುವ ಶ್ರೀಲಂಕಾ ತಂಡದಲ್ಲಿ ಕೆಲವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಕಾರಣ ಸಂಪೂರ್ಣ ತಂಡ ಕ್ವಾರಂಟೈನ್ಗೊಳಗಾಗಿದೆ. ಹೀಗಾಗಿ ಬರುವ ಜುಲೈ 13ರಿಂದ ಆರಂಭಗೊಳ್ಳಬೇಕಾಗಿದ್ದ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಜುಲೈ 17ಕ್ಕೆ ಮುಂದೂಡಿಕೆಯಾಗಿದೆ.
ಶ್ರೀಲಂಕಾ ಕ್ರಿಕೆಟ್ ಕ್ಯಾಂಪ್ನಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಎಎನ್ಐ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಲಂಕಾದ ಬ್ಯಾಟಿಂಗ್ ಕೋಚ್ ಹಾಗೂ ವಿಶ್ಲೇಷಕರಿಗೆ ಕೊರೊನಾ ದೃಢಗೊಂಡಿದೆ. ಹೀಗಾಗಿ ಸಂಪೂರ್ಣ ತಂಡ ಕ್ವಾರಂಟೈನ್ನಲ್ಲಿದ್ದು, ಮುಂದಿನ ಕೆಲ ದಿನಗಳ ಕಾಲ ನಿರಂತರವಾಗಿ ಟೆಸ್ಟ್ಗೆ ಒಳಗಾಗಲಿದೆ.