ಕರ್ನಾಟಕ

karnataka

ETV Bharat / sports

ಮಹಿಳಾ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಜೂಲನ್ ಗೋಸ್ವಾಮಿ - ವೆಸ್ಟ್​ ವಿಂಡೀಸ್​ vs ಭಾರತ . ಜೂಲನ್ ಗೋಸ್ವಾಮಿ ಹೆಚ್ಚು ಏಕದಿನ ವಿಕೆಟ್

ಗೋಸ್ವಾಮಿ ಈ ಸಾಧನೆ ಮೂಲಕ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿದರು. ಲಿನ್ 1982 ರಿಂದ 1988 ರವರೆಗೆ 39 ವಿಕೆಟ್​ ಪಡೆದಿದ್ದರು. ಭಾರತೀಯ ವೇಗಿ 2005ರಿಂದ 2022ರ ವರೆಗೆ 5 ವಿಶ್ವಕಪ್​ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 31ನೇ ಪಂದ್ಯವನ್ನಾಡಿದ್ದಾರೆ.

Jhulan Goswami becomes highest wicket taker in Women's World Cup history
ಮಹಿಳಾ ವಿಶ್ವಕಪ್​ ಇತಿಹಾಸದಲ್ಲಿ ಅತಿ ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಜೂಲನ್ ಗೋಸ್ವಾಮಿ

By

Published : Mar 12, 2022, 3:24 PM IST

ಹ್ಯಾಮಿಲ್ಟನ್​: ಮಹಿಳಾ ಕ್ರಿಕೆಟ್​​ನ ಲೆಜೆಂಡರಿ ಬೌಲರ್​ ಎನಿಸಿಕೊಂಡಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಹ್ಯಾಮಿಲ್ಟನ್‌ನಲ್ಲಿ ಶನಿವಾರ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಈ ಸಾಧನೆ ಮಾಡಿದ್ದಾರೆ. ಅವರು ವಿಂಡೀಸ್​ ತಂಡ ಅನಿಸಾ ಮೊಹಮ್ಮದ್​ ವಿಕೆಟ್ ಪಡೆಯುವ ಮೂಲಕ ಮಹಿಲಾ ಏಕದಿನ ವಿಶ್ವಕಪ್​ನಲ್ಲಿ ತಮ್ಮ 40 ವಿಕೆಟ್ ಪೂರ್ಣಗೊಳಿಸಿದರು.

ಗೋಸ್ವಾಮಿ ಈ ಸಾಧನೆ ಮೂಲಕ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿದರು. ಲಿನ್ 1982 ರಿಂದ 1988 ರವರೆಗೆ 39 ವಿಕೆಟ್​ ಪಡೆದಿದ್ದರು. ಭಾರತೀಯ ವೇಗಿ 2005ರಿಂದ 2022ರ ವರೆಗೆ 5 ವಿಶ್ವಕಪ್​ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 31ನೇ ಪಂದ್ಯವನ್ನಾಡಿದ್ದಾರೆ.

ಈಗಾಗಲೆ ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಕೂಡ ಜೂಲನ್ ಹೆಸರಿನಲ್ಲಿದೆ. ಅವರು 198 ಪಂದ್ಯಗಳಿಂದ 249 ವಿಕೆಟ್​ ಪಡೆದಿದ್ದಾರೆ. ಅವರು ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಕ್ಯಾಥರಿನ್​ ಲಾರೈನ್ ಫಿಟ್ಜ್​ಪ್ಯಾಟ್ರಿಕ್​(180,ನಿವೃತ್ತಿ) ಮತ್ತು ವೆಸ್ಟ್​ ಇಂಡೀಸ್​ನ ಅನಿಸಾ ಮೊಹಮ್ಮದ್​(180) ಅವರಿಗಿಂತಲೂ 69 ವಿಕೆಟ್​ ಮುಂದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ದಾಖಲೆಯ 317ರನ್​ಗಳಿಸಿತ್ತು. ಮಂಧಾನ 123, ಹರ್ಮನ್​ ಪ್ರೀತ್ ಕೌರ್​ 109 ರನ್​ಗಳಿಸಿದ್ದರು. ಆದರೆ ಬೃಹತ್ ಮೊತ್ತವನ್ನು ಬೆನ್ನತ್ತಿದ ವಿಂಡೀಸ್​ ಮೊದಲ ವಿಕೆಟ್​ಗೆ 12.2 ಓವರ್​ಗಳಲ್ಲಿ 100 ರನ್​ಗಳ ಜೊತೆಯಾಟದ ನೀಡಿದ ಹೊರತಾಗಿಯೂ ಕೇವಲ 162 ರನ್​ಗಳಿಗೆ ಆಲೌಟ್ ಆಯಿತು. ಡಿಯಾಂಡ್ರ ಡಾಟಿನ್ 62 ಮತ್ತು ಹೇಲಿ ಮ್ಯಾಥ್ಯೂಸ್​ 43 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಇದನ್ನೂ ಓದಿ:ವನಿತೆಯರ ವಿಶ್ವಕಪ್ ಕ್ರಿಕೆಟ್‌ : ಅಬ್ಬರಿಸಿ ನೆಲಕಚ್ಚಿದ ವೆಸ್ಟ್​ಇಂಡೀಸ್​, ಭಾರತಕ್ಕೆ 155 ರನ್​ಗಳ ಭರ್ಜರಿ ಗೆಲುವು!

ABOUT THE AUTHOR

...view details