ಲೀಡ್ಸ್:ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ನಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 76 ರನ್ಗಳ ಅಂತರದಿಂದ ಸೋಲು ಕಂಡಿದ್ದು, 5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.
3ನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಭಾರತ 2 ವಿಕೆಟ್ ಕಳೆದುಕೊಂಡು 215ರನ್ಗಳಿಸಿತ್ತು. ಆದರೆ 4ನೇ ದಿನ ಮೊದಲ ಸೆಷನ್ನಲ್ಲೆ ರಾಬಿನ್ಸನ್ ದಾಳಿಗೆ ತತ್ತರಿಸಿ ನಿನ್ನೆಯ ಮೊತ್ತಕ್ಕೆ ಕೇವಲ 63 ರನ್ ಸೇರಿಸಿ 99.3 ಓವರ್ಗಳಲ್ಲಿ 278ಕ್ಕೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 76 ರನ್ಗಳ ಹೀನಾಯ ಸೋಲು ಕಂಡಿತು.
ಶುಕ್ರವಾರ 3ನೇ ದಿನದಂತ್ಯಕ್ಕೆ 180 ಎಸೆತಗಳಲ್ಲಿ ಅಜೆಯ 91 ರನ್ಗಳಿಸಿದ್ದ ಚೇತೇಶ್ವರ್ ಪೂಜಾರ ಇಂದು ಕೇವಲ 9 ಎಸೆತಗಳನ್ನೆದುರಿಸಿ ಅದೇ ಮೊತ್ತಕ್ಕೆ ಔಟಾದರು. ಇವರ ಬೆನ್ನಲ್ಲೇ ನಿನ್ನೆ 45 ರನ್ಗಳಿಸಿದ್ದ ಕೊಹ್ಲಿ ಇಂದು ಆ ಮೊತ್ತವನ್ನು 55ಕ್ಕೇರಿಸಿಕೊಂಡು ನಿರ್ಗಮಿಸಿದರು. ಇವರಿಬ್ಬರು ರಾಬಿನ್ಸನ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ಉಪನಾಯಕ ಅಜಿಂಕ್ಯ ರಹಾನೆ (10) ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರೆ, ರಿಷಭ್ ಪಂತ್ ಕೇವಲ 1ರನ್ಗಳಿಸಿ ರಾಬಿನ್ಸನ್ಗೆ 4ನೇ ಬಲಿಯಾದರು.