ಕರ್ನಾಟಕ

karnataka

ETV Bharat / sports

ಪಾಕ್​​ ವಿರುದ್ಧದ ಪಂದ್ಯಾರಂಭಕ್ಕೂ ಮುನ್ನವೇ ಭಾರತೀಯ ಆಟಗಾರರು​​​ ಹೆದರಿದ್ದರು: ಇಂಜಮಾಮ್-ಉಲ್‌-ಹಕ್ - ಭಾರತ ವರ್ಸಸ್​ ಪಾಕ್​ ಪಂದ್ಯ

ಐಸಿಸಿ ಟಿ20 ವಿಶ್ವಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನವೇ ಟೀಂ ಇಂಡಿಯಾ ಆಟಗಾರರು​ ಒತ್ತಡಕ್ಕೊಳಗಾಗಿದ್ದರು ಎಂದು ಪಾಕಿಸ್ತಾನದ ಮಾಜಿ ಕ್ಯಾಪ್ಟನ್​ ಇಂಜಮಾಮ್​​-ಉಲ್​​​-ಹಕ್​ ಹೇಳಿದ್ದಾರೆ.

Inzamam-ul-Haq on Team india
Inzamam-ul-Haq on Team india

By

Published : Nov 26, 2021, 8:01 PM IST

ಕರಾಚಿ(ಇಸ್ಲಾಮಾಬಾದ್​):ಐಸಿಸಿ ಟಿ20 ವಿಶ್ವಪ್​​ನಲ್ಲಿ ಪಾಕ್​ ವಿರುದ್ಧ ಭಾರತ 10 ವಿಕೆಟ್​​ಗಳ ಹೀನಾಯ ಸೋಲು ಕಂಡಿತ್ತು. ಈ ವಿಚಾರವಾಗಿ ಮಾತನಾಡಿರುವ ಪಾಕ್​​ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​ ಇಂಜಮಾಮ್​​-ಉಲ್​​-ಹಕ್​​,​ ಉಭಯ ತಂಡಗಳ ನಡುವಿನ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನವೇ ಟೀಂ ಇಂಡಿಯಾ ಒತ್ತಡಕ್ಕೊಳಗಾಗಿ ಹೆದರಿತ್ತು ಎಂದಿದ್ದಾರೆ.

ಸುದ್ದಿಗೋಷ್ಠಿವೊಂದರಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿರುವ ಪಾಕ್​ ಮಾಜಿ ಕ್ಯಾಪ್ಟನ್​, ಪಾಕ್​ ವಿರುದ್ಧದ ಟಿ20 ಪಂದ್ಯ ಆರಂಭವಾಗುವ ಮೊದಲೇ ಭಾರತ ತಂಡ ಒತ್ತಡದಲ್ಲಿತ್ತು, ಜೊತೆಗೆ ಹೆದರಿತ್ತು. ಟಾಸ್​​ ಮಾಡಲು ಬಂದ ವಿರಾಟ್​​​​​ ಕೊಹ್ಲಿ ಅವರನ್ನು ನೋಡಿದಾಗ ಆತಿಥೇಯರು ಒತ್ತಡದಲ್ಲಿದ್ದರು ಎಂಬುದು ಸ್ಪಷ್ಟವಾಗಿತ್ತು ಎಂದು ಹೇಳಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್​ ಶರ್ಮಾ ಮತ್ತು ಕೆ.ಎಲ್.ರಾಹುಲ್​ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ನಮ್ಮ ತಂಡದ ಬಾಡಿ ಲಾಂಗ್ವೇಜ್​​ ಅವರಿಗಿಂತಲೂ ಉತ್ತಮವಾಗಿತ್ತು. ಮೈದಾನದಲ್ಲಿ ಬ್ಯಾಟ್​ ಮಾಡಲು ಕಣಕ್ಕಿಳಿದಿದ್ದ ರೋಹಿತ್​ ಶರ್ಮಾ ಅವರೇ ಒತ್ತಡದಲ್ಲಿದ್ದರು ಎಂದಿದ್ದಾರೆ.

ಇದನ್ನೂ ಓದಿ:New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್‌ ಕರಿನೆರಳು, ಮುಂದೂಡಿಕೆ?

ಭಾರತ ತಂಡ ಯಾವತ್ತೂ ಅವರು ಆಡಿದ ರೀತಿಯಲ್ಲಿ ಪಾಕ್​​ ವಿರುದ್ಧ ಆಡಲಿಲ್ಲ. ಅವರದು ಉತ್ತಮ ಟಿ20 ತಂಡವಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ 2-3 ವರ್ಷಗಳ ಭಾರತದ ಪ್ರದರ್ಶನ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.

ಪಾಕ್​​ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ತುಂಬಾ ಟೀಕೆ ಎದುರಿಸಿತು. ಈ ವೇಳೆ 3-4 ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದರು. ಆದರೆ ಸ್ಯಾಂಟ್ನರ್​ ಮತ್ತು ಸೋಧಿ ಬೌಲಿಂಗ್ ದಾಳಿ ಎದುರಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಟಿ20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ 10 ವಿಕೆಟ್​ಗಳ ಅಂತರ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್​ಗಳ ಅಂತರದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿತ್ತು. ಜೊತೆಗೆ, ಸೂಪರ್​-12 ಹಂತದಿಂದ ಹೊರಬಿದ್ದಿತ್ತು.

ABOUT THE AUTHOR

...view details