ಕರ್ನಾಟಕ

karnataka

ETV Bharat / sports

'ಭಾರತೀಯರ ಹೃದಯದಲ್ಲಿ ನಿಮಗಿದೆ ವಿಶೇಷ ಸ್ಥಾನ': ವಾರ್ನ್​ ನಿಧನಕ್ಕೆ ಸಚಿನ್​, ಕೊಹ್ಲಿ, ರೋಹಿತ್ ಸಂತಾಪ - ಸಚಿನ್ ತೆಂಡೂಲ್ಕರ್ ಸಂತಾಪ

ಸ್ಪಿನ್ ಮಾಂತ್ರಿಕ ಶೇನ್​ ವಾರ್ನ್ ನಿಧನಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದು, ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದ್ದೀರಿ ಎಂದಿದ್ದಾರೆ.

Tendulkar Emotional Tribute To Shane Warne
Tendulkar Emotional Tribute To Shane Warne

By

Published : Mar 4, 2022, 10:24 PM IST

Updated : Mar 4, 2022, 11:01 PM IST

ನವದೆಹಲಿ:ಆಸ್ಟ್ರೇಲಿಯಾ ಕ್ರಿಕೆಟ್​​ ದಿಗ್ಗಜ ಶೇನ್​ ವಾರ್ನ್ (52) ದಿಢೀರ್​ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸಿದ್ದಾರೆ. ಆಸ್ಟ್ರೇಲಿಯಾ ದಿಗ್ಗಜನೊಂದಿಗೆ ಉತ್ತಮ ಬಾಂಧವ್ಯ, ಸ್ನೇಹ ಇಟ್ಟುಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್ ಕೂಡ ಭಾವನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್​ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು, ನಿಮ್ಮನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರ ಪಾಲಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಇಡೀ ಜಗತ್ತೇ ನಿಮ್ಮೊಂದಿಗಿದೆ...' ಎಂದು ಉಕ್ರೇನ್‌ ಬೆಂಬಲಿಸಿ ಟ್ವೀಟ್‌ ಮಾಡಿದ್ದ ಶೇನ್ ವಾರ್ನ್‌

ರೋಹಿತ್ ಶರ್ಮಾ ಟ್ವೀಟ್​: ಇಲ್ಲಿ ಪದಗಳು ಇಲ್ಲ. ಇದು ಅತ್ಯಂತ ದುಃಖಕರವಾದ ಸಂಗತಿ. ಕ್ರಿಕೆಟ್ ಲೋಕದ ದಂತಕಥೆ ಮತ್ತು ಚಾಂಪಿಯನ್​ ನಮ್ಮನ್ನು ಅಗಲಿದ್ದಾರೆ ಎಂಬುದು ಇನ್ನೂ ನಂಬಲಾಗುತ್ತಿಲ್ಲ. RIP ಶೇನ್​ ವಾರ್ನ್​

ವಿರಾಟ್​ ಕೊಹ್ಲಿ: ಜೀವನ ತುಂಬಾ ಚಂಚಲ ಮತ್ತು ಅನಿರೀಕ್ಷಿತವಾಗಿದೆ. ಮೈದಾನದ ಹೊರಗೆ ನನಗೆ ಪರಿಚಯವಾದ ವ್ಯಕ್ತಿ ನೀವೂ. ನಿಮ್ಮ ಸಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಕೆಎಲ್ ರಾಹುಲ್​:ಕ್ರೀಡೆಯ ದಂತಕಥೆ. ಕ್ರೀಡೆಯ ಕಡೆಗೆ ಒಲವು ತೋರಲು ಅನೇಕ ಆಟಗಾರರಿಗೆ ಮಾದರಿಯಾಗಿದ್ದವರು. ವಾರ್ನರ್ ಗೆ ಅವರೇ ಸಾಟಿ. ಅವರಂತೆ ಮತ್ತೊಬ್ಬರಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ದೊರೆ. ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು

ಇವರ ಜೊತೆಗೆ ಜಸ್ಪ್ರಿತ್ ಬುಮ್ರಾ, ಚೇತೇಶ್ವರ್ ಪೂಜಾರಾ, ಯಜುವೇಂದ್ರ ಚಹಲ್​,ಜೋಶ್ ಬಟ್ಲರ್, ಭಾರತೀಯ ಕ್ರಿಕೆಟ್ ಮಂಡಳಿ,ಬ್ರೇನ್ ಲಾರಾ, ರಾಬಿನ್ ಉತ್ತಪ್ಪ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಹ ಸಂತಾಪ ಸೂಚಿಸಿದೆ.

Last Updated : Mar 4, 2022, 11:01 PM IST

ABOUT THE AUTHOR

...view details