ನವದೆಹಲಿ:ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಪುರುಷರ ತಂಡ ಯುಕೆಗೆ ಪ್ರವಾಸ ಕೈಗೊಂಡರೆ, ಮಹಿಳಾ ತಂಡ ಒಂದು ಟೆಸ್ಟ್ ಮತ್ತು ಸೀಮಿತ ಓವರ್ಗಳ ಸರಣಿಗಾಗಿ ಪುರುಷರ ತಂಡದ ಜೊತೆಯೇ ಇಂಗ್ಲೆಂಡ್ಗೆ ಹಾರಲಿದೆ. ಇದಕ್ಕೂ ಮುನ್ನ ಮಹಿಳಾ ತಂಡದ ಎಲ್ಲಾ ಸದಸ್ಯರಿಗೂ COVID-19 ವ್ಯಾಕ್ಸಿನೇಷನ್ನ ಮೊದಲ ಡೋಸ್ ನೀಡಲಾಗಿದೆ.
ಭಾರತದ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದಂತೆ COVID-19 ವ್ಯಾಕ್ಸಿನೇಷನ್ನ ಮೊದಲ ಡೋಸ್ ಪೂರ್ಣಗೊಳಿಸಿದೆ. ಪ್ರಸ್ತುತ ಮಹಿಳಾ ತಂಡ ಮುಂಬೈನಲ್ಲಿ ಕ್ಯಾರೆಂಟೈನ್ಲ್ಲಿದೆ. ಇನ್ನು ಮೊದಲ ಡೋಸ್ಅನ್ನು ಎಲ್ಲಾ ಆಟಗಾರ್ತಿಯರು ಪಡೆದಿದ್ದು, ಎರಡನೇ ಡೋಸ್ಅನ್ನು ಯುಕೆ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
"ಸಂಪೂರ್ಣ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರಿಗೂ ಈಗ ಮೊದಲ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಮೊದಲ ಡೋಸ್ ಪಡೆಯಲು ಕೆಲವೇ ಕೆಲವರು ಬಾಕಿ ಉಳಿದಿದ್ದು, ಅವರಿಗೆ ಗುರುವಾರ ವ್ಯಾಕ್ಸಿನೇಷನ್ ನೀಡಲಾಗಿದೆ. ಎಲ್ಲಾ ಆಟಗಾರ್ತಿಯರಿಗೆ ಕೋವಿಶೀಲ್ಡ್ ನೀಡಲಾಗಿದೆ. ಏಕೆಂದರೆ ಇದು ಇಂಗ್ಲೆಂಡ್ನಲ್ಲಿ ಎರಡನೇ ಡೋಸ್ ಪಡೆಯಲು ಸಹಾಯ ಮಾಡುತ್ತದೆ" ಎಂದು ಮೂಲಗಳು ತಿಳಿಸಿವೆ.