ಮ್ಯಾಕೆ (ಆಸ್ಟ್ರೇಲಿಯಾ):ಭಾರತೀಯ ಮಹಿಳಾ ಕ್ರಿಕೆಟಿಗರಾದ (Indian Women cricket) ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ರಾಧಾ ಯಾದವ್ ಮತ್ತು ಸ್ಮೃತಿ ಮಂಧಾನ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (Indian premier League) ಪ್ರಾರಂಭವಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) (BCCI) ಈ ಹಿಂದೆ ಮೂರು ತಂಡಗಳ ಮಹಿಳಾ ಟಿ-20 ಚಾಲೆಂಜ್ (T20 Challenge) ಅನ್ನು ಆಯೋಜಿಸಿತ್ತು.
Cricket.com.au ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಪ್ರಸ್ತುತ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL)ನಲ್ಲಿ ಭಾಗವಹಿಸುತ್ತಿರುವ ಜೆಮಿಮಾ, ಹರ್ಮನ್‌ಪ್ರೀತ್ (harmanpreet kaur), ರಾಧಾ ಮತ್ತು ಸ್ಮೃತಿ (Smriti Mandhana) ಅವರು ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಾವು ಭಾರತದಲ್ಲಿ ಮಹಿಳಾ ಐಪಿಎಲ್ (Women IPL) ನಡೆಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಹುಡುಗಿಯರ ಗುಣಮಟ್ಟವನ್ನು ನೋಡಿದರೆ, ನಮ್ಮಲ್ಲಿ ಅಷ್ಟು ಕೌಶಲ್ಯವಿಲ್ಲ ಎಂದು ಅಲ್ಲ. ಇದು ಕೇವಲ ಮಾನ್ಯತೆಯ ಪ್ರಮಾಣವಾಗಿದೆ. ಆ ರೀತಿಯ ಟೂರ್ನಿಗಳು ಹೆಚ್ಚು ಕೌಶಲ್ಯತೆ ಪಡೆಯಲು ಸಹಕಾರಿಯಾಗಲಿವೆ ಎಂದು ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ಪರ ಆಡುತ್ತಿರುವ ಜೆಮಿಮಾ ಹೇಳಿದ್ದಾರೆ.