ಸಿಲ್ಹೆಟ್ ( ಬಾಂಗ್ಲಾದೇಶದ ) :ಏಷ್ಯಾ ಕಪ್ ಫೈನಲ್ನಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ವತಿನಿತೆಯರು ಏಳನೇ ಬಾರಿ ಏಷ್ಯಾ ಕಪ್ ಗೆದ್ದು ದಾಖಲೆ ಬರೆದಿದ್ದಾರೆ. ಲಂಕಾ ನೀಡಿದ್ದ 65 ರನ್ಗಳ ಸುಲಭ ಗುರಿಯನ್ನು 8.3 ಓವರ್ನಲ್ಲೇ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದರು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ಟೀಂ ಎಂಟು ವಿಕೆಟ್ಗಳ ಜಯಭೇರಿ ಭಾರಿಸಿದೆ.
ಮೊದಲು ಬ್ಯಾಟ್ ಮಾಡಿದ ಲಂಕಾ ವನಿತೆಯರನ್ನು ಭಾರತೀಯರು ಕಾಡಿದರು. 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 69 ರನ್ನ ಗುರಿಯನ್ನು ಭಾರತಕ್ಕೆ ನೀಡಿದರು. ಇದರಲ್ಲಿ ಓಡಾಡಿ ರಣಸಿಂಘೆ 13 ರನ್ ಮತ್ತು ಇನೋಕಾ ರಣವೀರಾ 18 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು ಹತ್ತು ರನ್ ಗಡಿ ದಾಟಲಿಲ್ಲ.
ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ 8.3 ಓವರ್ನಲ್ಲಿ ಸ್ಮೃತಿ ಮಂಧಾನ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಗೆಲುವು ಸಾಧಿಸಿತು. ಸ್ಮೃತಿ ಮಂಧಾನ ಜೊತೆ ಆರಂಭಿಕರಾಗಿ ಬಂದ ಶೆಫಾಲಿ ವರ್ಮಾ (5) ಬೇಗ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಜೆಮಿಮಾ ರಾಡ್ರಿಗಸ್ (2) ಕೂಡ ಜಾಸ್ತಿ ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ.
ಕೌರ್ ಮಂಧಾನ ಜೊತೆಯಾಟ :ಭಾರತ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಸ್ಮೃತಿ ಮಂಧಾನ ತಮ್ಮ ಬಿರುಸಿನ ಆಟವನ್ನು ಮುಂದುವರೆಸಿದ್ದರು. 32 ರನ್ಗೆ ಭಾರತ ಎರಡು ವಿಕೆಟ್ ಕಳೆದುಕೊಂಡಿತ್ತು. ಆಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಂಧಾನಗೆ ಜೊತೆಯಾದರು. ಬಿರುಸಿನಿಂದ ಆಡುತ್ತಿದ್ದ ಮಂಧಾನ 25 ಎಸೆತಗಳಲ್ಲಿ 6 ಬೌಡರಿ ಮತ್ತು 3 ಸಿಕ್ಸರ್ ಜೊತೆಗೆ 51ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ 11 ರನ್ ಗಳಿಸಿದರು.
ಏಳನೇ ಬಾರಿ ಏಷ್ಯಾಕಪ್ :ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ಸೋಲಿಸಿ ಏಳನೇ ಬಾರಿ ಕಪ್ ಮಡಿಲಿಗೆ ಹಾಕಿಕೊಂಡರು. ಪುರುಷರ ತಂಡ ಏಳು ಬಾರಿ ಏಷ್ಯಾಕಪ್ ಜಯಿಸಿದೆ. ವನಿತೆಯರೂ ಈ ದಾಖಲೆಯಲ್ಲಿ ಸಮಭಲ ಸಾಧಿಸಿದ್ದಾರೆ.
ಅತೀ ಹೆಚ್ಚು ಪಂದ್ಯಗಳನ್ನಾಡುದ ಸಾಧನೆ : ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಅತೀ ಹೆಚ್ಚು ಟಿ 20 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಅವರಿಗೆ ಇಂದಿನ ಪಂದ್ಯ 137 ಟಿ 20ಯ ಆಟವಾಗಿತ್ತು.
ಮೊದಲ ಇನ್ನಿಂಗ್ಸ್ : ಭಾರತೀಯ ವನಿತೆಯರ ಬಿರುಸಿನ ಬೌಲಿಂಗ್ ದಾಳಿಗೆ ಲಂಕಾ 65ರನ್ಗೆ ನಿಯಂತ್ರಣ ಗೊಂಡಿತು. ತಂಡ 9 ರನ್ ಗಳಿಸುವಷ್ಟರಲ್ಲಿ ನಾಯಕಿ ಚಾಮರಿ ಅಟಪಟ್ಟು(6), ಅನೌಷ್ಕಾ ಸಂಜೀವನಿ(2), ಮಾದವಿ(1) ಮತ್ತು ಹಾಸಿನಿ ಪೆರೇರಾ(0) ಔಟ್ ಆದರು.