ಕರ್ನಾಟಕ

karnataka

ETV Bharat / sports

ಬಾಲಿವುಡ್​ನ ಕಾಲಾ ಚಷ್ಮಾ ಹಾಡಿಗೆ ಕುಣಿದು ಭಾರತ ತಂಡ ವಿಜಯೋತ್ಸವ: ನೋಡಿ - ಭಾರತ ಕ್ರಿಕೆಟ್​ ತಂಡದ ನೃತ್ಯ

ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವಿನ ಬಳಿಕ ಬಾಲಿವುಡ್​ ಹಾಡಿಗೆ ನೃತ್ಯ ಮಾಡಿ ಭಾರತ ತಂಡ ಸಂಭ್ರಮಾಚರಣೆ ಮಾಡಿದೆ. ಈ ವಿಡಿಯೋವನ್ನು ಶಿಖರ್​ ಧವನ್​ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

indian-team-danced
ಭಾರತ ತಂಡ ವಿಜಯೋತ್ಸವ

By

Published : Aug 23, 2022, 12:48 PM IST

ಜಿಂಬಾಬ್ವೆಯನ್ನು ಅದರದ್ದೇ ನೆಲದಲ್ಲಿ ಏಕದಿನ ಸರಣಿಯನ್ನು ಕ್ಲೀನ್​ಸ್ವೀಪ್​ ಮಾಡಿದ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಭರ್ಜರಿಯಾಗಿಯೇ ವಿಜಯೋತ್ಸವ ಆಚರಿಸಿದೆ. ಮೂರನೇ, ಅಂತಿಮ ಪಂದ್ಯವನ್ನೂ ಗೆದ್ದ ಬಳಿಕ ತಂಡದ ಆಟಗಾರರು ಡ್ರೆಸ್ಸಿಂಗ್​ ರೂಮಿನಲ್ಲಿ ಬಾಲಿವುಡ್​ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಇದರ ವಿಡಿಯೋವನ್ನು ಆರಂಭಿಕ ಆಟಗಾರ ಗಬ್ಬರ್​ಸಿಂಗ್​ ಖ್ಯಾತಿಯ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ. ಭಾರತ ತಂಡದ ಆಟಗಾರರು 'ಬಾರ್ ಬಾರ್ ದೇಖೋ' ಚಿತ್ರದ ಹಿಟ್ ಗೀತೆಯಾದ 'ಕಾಲಾ ಚಷ್ಮಾ' ಗೆ ನೃತ್ಯ ಮಾಡಿದ್ದಾರೆ. ಈ ಹಿಂದೆ ಇದೇ ಹಾಡಿನ ಬೀಟಿಗೆ ನಾರ್ವೆಯ ಕ್ವಿಕ್​ ಸ್ಟ್ರೈಲ್​ ತಂಡ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.

ಇನ್ನು ಮೂರನೇ ಪಂದ್ಯವನ್ನೂ ಭಾರತ 13 ರನ್​ಗಳಿಂದ ಗೆಲ್ಲುವ ಮೂಲಕ ಸರಣಿ ಕ್ಲೀನ್​ಸ್ವೀಪ್​ ಮಾಡಿತು. ಮೂರು ಪಂದ್ಯಗಳ ಸರಣಿಯಲ್ಲಿ 245 ರನ್​ ಚಚ್ಚಿ ಅತ್ಯುತ್ತಮ ಪ್ರದರ್ಶನ ತೋರಿದ ಶುಭಮನ್​ ಗಿಲ್​ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್​ಗೆ ಕೋವಿಡ್ ಸೋಂಕು: ವರದಿ

ABOUT THE AUTHOR

...view details