ಕರ್ನಾಟಕ

karnataka

ETV Bharat / sports

IPL 2022: ಆರ್​ಸಿಬಿ, ಪಂಜಾಬ್ ಕಿಂಗ್ಸ್​ ನಡುವೆ ಹಣಾಹಣಿ.. ಉಭಯ ತಂಡಗಳಿಗೆ ಹೊಸ ನಾಯಕತ್ವ - ಪಂಜಾಬ್ ಪ್ಲೇಯಿಂಗ್ 11

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಮೊದಲ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದ್ದು, ಎರಡೂ ತಂಡಗಳಿಗೆ ಹೊಸ ನಾಯಕರ ಸಾರಥ್ಯವಿದೆ.

Indian Premier League: RCB and Punjab Kings match today
IPL 2022: ಆರ್​ಸಿಬಿ, ಪಂಜಾಬ್ ಕಿಂಗ್ಸ್​ ನಡುವೆ ಇಂದು ಪಂದ್ಯ.. ಉಭಯ ತಂಡಗಳಿಗೆ ಹೊಸ ನಾಯಕತ್ವ

By

Published : Mar 27, 2022, 3:53 PM IST

ಮುಂಬೈ:ಹೊಸ ನಾಯಕತ್ವದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಮೊದಲ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದ್ದು, ಭಾನುವಾರ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಪಂಜಾಜ್ ಕಿಂಗ್ಸ್​ ತಂಡಕ್ಕೂ ಈ ಬಾರಿ ಹೊಸ ನಾಯಕನ ಸಾರಥ್ಯವಿದೆ. ಮುಂಬೈನ ಡಾ. ಡಿ ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಂದ್ಯ ನಡೆಯಲಿದೆ.

ಐಪಿಎಲ್​ನ 2ನೇ ಪಂದ್ಯ ಇದಾಗಿದ್ದು, ಆರ್​ಸಿಬಿಗೆ ಫಾಫ್ ಡುಪ್ಲೆಸಿಸ್ ಮತ್ತು ಪಂಜಾಬ್ ಕಿಂಗ್ಸ್​ಗೆ ಮಯಾಂಕ್ ಅಗರ್ವಾಲ್ ಸಾರಥ್ಯ ವಹಿಸುತ್ತಿದ್ದಾರೆ. ಹೀಗಾಗಿ ಯಾರ ನಾಯಕತ್ವಕ್ಕೆ ಗೆಲುವು ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈವರೆಗಿನ ಐಪಿಎಲ್ ಪಂದ್ಯಗಳಲ್ಲಿ 28 ಬಾರಿ ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಿದ್ದು, 13 ಬಾರಿ ಆರ್​ಸಿಬಿ, ಪಂಜಾಬ್ 15 ಬಾರಿ ಗೆಲುವು ಸಾಧಿಸಿದೆ.

ಆರ್​ಸಿಬಿ ತಂಡವು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದ್ದು, ಜೋಷ್ ಹ್ಯಾಝಲ್​ವುಡ್ ಮತ್ತು ಮ್ಯಾಕ್ಸ್​ವೆಲ್ ಆಡುವ ಅನುಮಾನವಿದ್ದು, ಹೊಸಬರಿಗೆ ಅವಕಾಶ ದೊರೆಯಬಹುದು ಎನ್ನಲಾಗ್ತಿದೆ. ಪಂಜಾಬ್ ಕಿಂಗ್ಸ್ ತಂಡವೂ ಬಲಿಷ್ಠ ಆಟಗಾರರನ್ನು ಹೊಂದಿದೆ. ಜಾನಿ ಬೈರ್​ಸ್ಟೋವ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಪಂಜಾಬ್ ಕಿಂಗ್ಸ್ ಸಂಭಾವ್ಯ ಪಟ್ಟಿ: ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್​ಸ್ಟೋನ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಶಾರುಖ್ ಖಾನ್, ಜಿತೇಶ್ ಶರ್ಮಾ, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ಕಗಿಸೊ ರಬಾಡ, ರಾಹುಲ್ ಚಹರ್ ಮತ್ತು ಅರ್ಷದೀಪ್ ಸಿಂಗ್

ಆರ್​ಸಿಬಿ ಸಂಭಾವ್ಯ ಪಟ್ಟಿ:ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಅನೂಜ್ ರಾವತ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್

ಇದನ್ನೂ ಓದಿ:IPL 2022: ಮುಂಬೈ ವಿರುದ್ಧ ಟಾಸ್​​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್​​ ಆಯ್ಕೆ

ABOUT THE AUTHOR

...view details