ಕರ್ನಾಟಕ

karnataka

ETV Bharat / sports

ಐಪಿಎಲ್​ ಹರಾಜು: ಎರಡೂ ಕೈಯಲ್ಲಿ ಬೌಲಿಂಗ್​ ಮಾಡಬಲ್ಲ ಈ ದೇಶಿ ಆಟಗಾರ ಯಾರು ಗೊತ್ತೇ?.. - Indian Premier League

ಪಶ್ಚಿಮ ಬಂಗಾಳ ಮೂಲದ ದ್ವಂದ್ವಾರ್ಥದ ಕ್ರಿಕೆಟಿಗ ಕೌಶಿಕ್ ಮೈಟಿ ಐಪಿಎಲ್ ಹರಾಜಿನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕೌಶಿಕ್ ಮೈಟಿ
ಕೌಶಿಕ್ ಮೈಟಿ

By ETV Bharat Karnataka Team

Published : Dec 19, 2023, 3:59 PM IST

ಕೋಲ್ಕತ್ತ (ಪಶ್ಚಿಮ ಬಂಗಾಳ) :ಈಗಾಗಲೇ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 2024ರ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿರುವ ಘಟಾನುಘಟಿ ಆಟಗಾರರ ಮಧ್ಯೆ ಬಹಳ ಅಪರೂಪದ ವಿಭಿನ್ನ ಕೌಶಲ್ಯ ಹೊಂದಿರುವ ಪಶ್ಚಿಮ ಬಂಗಾಳ ಮೂಲದ ಯುವ ಆಟಗಾರನ ಹೆಸರು ಸದ್ದು ಮಾಡುತ್ತಿದೆ.

22 ವರ್ಷದ ಆಟಗಾರ ಕೌಶಿಕ್ ಮೈಟಿ ತನ್ನ ಎರಡು ಕೈಗಳಿಂದ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದು, ಎಡಗೈಯಲ್ಲಿ ಆರ್ಥೊಡಾಕ್ಸ್ ಸ್ಪಿನ್​ ಮತ್ತು ಬಲಗೈ ಆಫ್ ಬ್ರೇಕ್ ಬೌಲಿಂಗ್‌ ಮಾಡಬಲ್ಲರು. ಕ್ಲಬ್​ ಕ್ರಿಕೆಟ್‌ನಲ್ಲಿ ಹಾಗೂ ಬಂಗಾಳ ತಂಡದಲ್ಲಿ ಆಡುವ ಕೌಶಿಕ್​ ತನ್ನ ಎರಡು ಕೈಗಳಿಂದ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಪಡೆದು ಮಿಂಚಿದ್ದಾರೆ.

ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳದ ಜೆರ್ಸಿ ತೊಟ್ಟು ತಮ್ಮ ಚೊಚ್ಚಲ ಪಂದ್ಯವಾಡಿದ್ದಾರೆ. ಈ ಟೂರ್ನಿಯಲ್ಲಿ ಕೌಶಿಕ್​ ಪಂಜಾಬ್ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೇ, ಮುಷ್ತಾಕ್ ಅಲಿ ಟ್ರೋಫಿಯಲ್ಲೂ (ದೇಶೀಯ ಟಿ20 ಪಂದ್ಯಾವಳಿ) ಕೌಶಿಕ್ ಬಂಗಾಳವನ್ನು ಪ್ರತಿನಿಧಿಸಿದ್ದಾರೆ. ಈ ಎಲ್ಲ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್​ ಪ್ರದರ್ಶನ ತೋರಿರುವ ಕೌಶಿಕ್​ ಅವರು ಸಹಜವಾಗಿಯೇ ಐಪಿಎಲ್ ತಂಡಗಳ ಗಮನ ಸೆಳೆದಿದ್ದಾರೆ.

ಕೌಶಿಕ್ ರಾಜಸ್ಥಾನ್ ರಾಯಲ್ಸ್ ಆಯೋಜಿಸಿದ್ದ ಶಿಬಿರದಲ್ಲಿ ಪಾಲ್ಗೊಂಡರು ಅಭ್ಯಾಸ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ಯಾಂಪ್‌ನಲ್ಲೂ ಕೂಡ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ಬ್ಯಾಟರ್​ ರಿಕಿ ಪಾಂಟಿಂಗ್‌ ಅವರಿಂದ ಕೌಶಿಕ್​ ಪ್ರಶಂಸೆ ಪಡೆದಿದ್ದಾರೆ. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಿಬಿರಕ್ಕೂ ಆಹ್ವಾನಿಸಲಾಗಿತ್ತು. ಆದರೇ, ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೌಶಿಕ್​ ಬೆಂಗಾಲ್ ಪರ ಆಡುವುದರಲ್ಲಿ ನಿರತರಾಗಿದ್ದರಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.

ಸಾಕಷ್ಟು ಅಡೆತಡೆಗಳನ್ನು ಜಯಿಸಿರುವ ಕೌಶಿಕ್​ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದಾರೆ. ಕೌಶಿಕ್​ ಅವರ ತಂದೆ ಪಾನ್ ಮಸಾಲಾ ಅಂಗಡಿ ನಡೆಸುತ್ತಿದ್ದು, ಓರ್ವ ಹಿರಿಯ ಸಹೋದರರನ್ನು ಹೊಂದಿದ್ದಾರೆ. ಅಂಗಡಿ ನಡೆಸುತ್ತಲೇ ಮಗನ ಕ್ರಿಕೆಟ್​ ಪಯಣವನ್ನು ಪೋಷಕರು ಬೆಳೆಸುತ್ತಿದ್ದಾರೆ. ಏನಾದರೂ ಈ ಬಾರಿ ಐಪಿಎಲ್​ ಹರಾಜಿನಲ್ಲಿ 10 ತಂಡಗಳ ಪೈಕಿ ಯಾವುದರೂ ಒಂದು ತಂಡಕ್ಕೆ ಕೌಶಿಕ್ ಬಿಕರಿಯಾದರೇ ಕ್ರಿಕೆಟ್ ಮೈದಾನದಲ್ಲಿ ಹೆಸರು ಮಾಡುವ ಮೂಲಕ ತನ್ನ ತಂದೆ - ತಾಯಿಯ ಸಂತೋಷಕ್ಕೆ ಕಾರಣವಾಗಲಿದ್ದಾರೆ.

’’ಆರಂಭದ ದಿನಗಳಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಆಟವನ್ನು ನೋಡಿ ಕ್ರಿಕೆಟ್ ಮೇಲಿನ ಪ್ರೀತಿ ಬೆಳೆಸಿಕೊಂಡಿದ್ದೆ. ಆ ನಂತರ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್ ಧೋನಿ ಮತ್ತು ದಿಗ್ಗಜ ಬ್ಯಾಟರ್​ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಕೌಶಲ್ಯದಿಂದ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದೇನೆ. ಸೌರವ್ ಮತ್ತು ರಿಕಿ ಸರ್ ಇಬ್ಬರೂ ನನಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ಕ್ರಿಕೆಟಿಗನಾಗಲು ನಾನು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ‘‘ ಎಂದು ಮೈಟಿ ಹೇಳಿದ್ದಾರೆ.

ಇದನ್ನೂ ಓದಿ :ಐಪಿಎಲ್​ ಹರಾಜು: ದಾಖಲೆಯ ಮೊತ್ತಕ್ಕೆ ಹೈದರಾಬಾದ್​ ತಂಡಕ್ಕೆ ​ಬಿಕರಿಯಾದ ಪ್ಯಾಟ್​ ಕಮಿನ್ಸ್​

ABOUT THE AUTHOR

...view details