ಕರ್ನಾಟಕ

karnataka

ETV Bharat / sports

IPL 2023: ಗಾಯಾಳುಗಳ ನಡುವೆ ಭರವಸೆ ನೀಡಬಲ್ಲ ಬೌಲರ್​ಗಳಿವರು.. - ETV Bharath Karnataka

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಗೆ ಗಾಯಾಳುಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಅನುಭವಿ ಆಟಗಾರರೇ ತಂಡದಿಂದ ಹೊರಗಿದ್ದಾರೆ. ಈ ನಡುವೆ ಬೌಲಿಂಗ್​ನಲ್ಲಿ ಪ್ರಭಾವ ಬೀರಬಲ್ಲ ಬೌಲರ್​ಗಳಿವರು..

Indian Premier League 2023 top five bowlers
IPL 2023: ಗಾಯಾಳುಗಳ ನಡುವೆ ಭರವಸೆ ನೀಡ ಬಲ್ಲ ಬೌಲರ್​ಗಳಿವರು..

By

Published : Mar 28, 2023, 10:50 PM IST

ಇನ್ನು ಮೂರು ದಿನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16 ನೇ ಆವೃತ್ತಿ ಪ್ರಾರಂಭವಾಗಲಿದೆ. ಅಂತಾರಾಷ್ಟ್ರೀಯ ತಂಡಗಳಲ್ಲಿ ಬೇರೆ ಬೇರೆ ದೇಶಗಳನ್ನು ಆಟಗಾರರು ಪ್ರತಿನಿಧಿಸಿದರೆ ಐಪಿಎಲ್​ನಲ್ಲಿ ತಮ್ಮ ನೆಚ್ಚಿನ ತಂಡದಲ್ಲಿ ಕಂಡಾಗ ಅವರಿಗೆ ಅಭಿಮಾನಿಗಳು ಬೇರೆ ರೀತಿಯ ಪ್ರೀತಿ ತೋರುತ್ತಾರೆ. ಅನೇಕ ಕ್ರಿಕೆಟ್​ ಆಟಗಾರರು ತಮ್ಮ ಫ್ರಾಂಚೈಸಿಯ ಸಿಟಿಗಳನ್ನು ತಮ್ಮ ಎರಡನೇ ತವರು ಎಂದು ಕರೆದಿದ್ದಾರೆ.

ಐಪಿಎಲ್​ ಹೆಚ್ಚು ರನ್​ ಹೊಳೆ ಹರಿಯುವ ಪಂದ್ಯವಾದರು ಕೆಲ ಬೌಲರ್​ಗಳು ಬಿರುಸಿನ ಬ್ಯಾಟಿಂಗ್​ಗೆ ಟಕ್ಕರ್​ ಕೊಡುವ ಬೌಲಿಂಗ್​ ಮಾಡಿಗಮನ ಸೆಳೆಯುತ್ತಾರೆ. ತಂಡದ ಗೆಲುವಿಗೆ ಬೌಲಿಂಗ್​ ಕಾರಣವಾಗಿರುತ್ತದೆ. ಒಂದು ಸಮಯದಲ್ಲಿ ಹೈದರಾಬಾದ್​ ತಂಡವನ್ನು ಅದ್ಭುತ ಬೌಲಿಂಗ್​ ಪಡೆ ಎಂದೇ ಗುರುತಿಸಲಾಗಿತ್ತು. 16ನೇ ಸೀಸನ್​ನಲ್ಲಿ ಈ ಐವರು ಬೌಲರ್​ಗಳ ಮೇಲೆ ಭಾರಿ ನಿರೀಕ್ಷೆಗಳಿವೆ.

ಉಮ್ರಾನ್ ಮಲಿಕ್ (ಸನ್ ರೈಸರ್ಸ್ ಹೈದರಾಬಾದ್): ವೇಗದ ಬೌಲಿಂಗ್​ ವಿಭಾಗಕ್ಕೆ ಬಂದಾಗ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನಕಾರರಲ್ಲಿ ಒಬ್ಬರಾದ ಮಲಿಕ್​ ಪ್ರಮುಖರಾಗಿದ್ದಾರೆ. ಅವರು ಕಳೆದ ವರ್ಷ 150ರ ವೇಗದಲ್ಲಿ ತಮ್ಮ ಬೌಲಿಂಗ್​ ಪ್ರದರ್ಶನ ನೀಡಿದ್ದರು. ಕಳೆದ ಆವೃತ್ತಿಯಲ್ಲಿ 157.3 ಕಿಮೀ ವೇಗದಲ್ಲಿ ಬೌಲಿಂಗ್​ ಮಾಡಿ ಗಮನ ಸೆಳೆದಿದ್ದರು.

ಉಮ್ರಾನ್ (21) ಕಳೆದ ಋತುವಿನಲ್ಲಿ 14 ಪಂದ್ಯಗಳಲ್ಲಿ 22.50 ಸರಾಸರಿಯಲ್ಲಿ 22 ವಿಕೆಟ್ ಪಡೆದಿದ್ದರು. ಈ ಸೀಸನ್​ನಲ್ಲಿ ಅವರಿಂದ ಗಂಟೆಗೆ 160 ಕಿಮೀ ವೇಗದ ಬವಲಿಂಗ್​ ನಿರೀಕ್ಷೆ ಮಾಡಲಾಗುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆಯನ್ನು ಹೊಂದಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಜಮ್ಮು ಕಾಶ್ಮೀರಿ ಯುವ ವೇಗಿ ಮಲಿಕ್​ರನ್ನು ಪ್ರಶಂಸಿಸಿದ್ದಾರೆ.

ಜೋಫ್ರಾ ಆರ್ಚರ್ (ಮುಂಬೈ ಇಂಡಿಯನ್ಸ್): ಗಾಯಗಳಿಂದ ಚೇತರಿಸಿಕೊಂಡ ನಂತರ, ಇಂಗ್ಲೆಂಡ್ ವೇಗಿ 2020 ರಿಂದ ಮೊದಲ ಬಾರಿಗೆ ಐಪಿಎಲ್‌ಗೆ ಮರಳಲು ಸಿದ್ಧರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವೇಗದ ದಾಳಿಗೆ ಅದ್ಭುತ ಸೇರ್ಪಡೆಯಾಗಲಿದ್ದಾರೆ. 27ರ ಹರೆಯದ ವೇಗಿ ಇದುವರೆಗೆ 35 ಐಪಿಎಲ್ ಪಂದ್ಯಗಳನ್ನು ಆಡಿದ್ದು, 7.13ರ ಎಕಾನಮಿ ದರದಲ್ಲಿ 46 ವಿಕೆಟ್ ಪಡೆದಿದ್ದಾರೆ. ಜಸ್ಪಿತ್​ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ಆರ್ಚರ್​ ತಂಡಕ್ಕೆ ಆಸರೆಯಾಗಿದ್ದಾರೆ.

ಗಾಯಗಳಿಂದಾಗಿ ಬಹಳಷ್ಟು ಸಮಯ ಕ್ರಿಕೆಟ್​​ನಿಂದ ದೂರ ಉಳಿದಿದ್ದ ಆರ್ಚರ್ ಜನವರಿಯಲ್ಲಿ ಸೌಥ್​ ಆಫ್ರಿಕಾ ಟಿ20 ಲೀಗ್​ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಎಂಐ ಕೇಪ್ ಟೌನ್ ಪರ ಆಡಿದ ಅವರು 3/27 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ 18 ರ ಸರಾಸರಿಯಲ್ಲಿ ಎಂಟು ವಿಕೆಟ್‌ಗಳನ್ನು ಪಡೆದರು. ಟಿ20 ಲೀಗ್​ ಆಡಿದ ಆರ್ಚರ್‌ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶ ಪಡೆದುಕೊಂಡರು. ನಾಲ್ಕು ಏಕದಿನ ಮತ್ತು ಒಂದು ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ 13 ವಿಕೆಟ್​ಗಳ ಪಡೆದರು.

ಆಡಮ್ ಝಂಪಾ (ರಾಜಸ್ಥಾನ್ ರಾಯಲ್ಸ್): ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್, ಝಂಪಾ ವಿಶ್ವದ ಅಗ್ರ ವೈಟ್ ಬಾಲ್ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಪ್ರಭಾವ ಬೀರಿದ್ದಾರೆ. ಅವರು ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ಗೆ ಪಾದಾರ್ಪಣೆ ಮಾಡಿದ ನಂತರ, ಅವರು 99 ಪಂದ್ಯಗಳಲ್ಲಿ 114 ವಿಕೆಟ್‌ಗಳನ್ನು ಪಡೆದಿದ್ದಾರೆ.

2021 ರಲ್ಲಿ ಯುಎಇಯಲ್ಲಿ ಆಸ್ಟ್ರೇಲಿಯಾದ ಚೊಚ್ಚಲ ಟಿ20 ವಿಶ್ವಕಪ್ ವಿಜಯೋತ್ಸವದಲ್ಲಿ ಝಂಪಾ ಅವರ ಬೌಲಿಂಗ್​ ನಿರ್ಣಾಯಕವೆಂದು ಸಾಬೀತಾಯಿತು. ಕೇವಲ 5.81ರ ಎಕಾನಮಿಯಲ್ಲಿ 13 ವಿಕೆಟ್‌ ಪಡೆದಿದ್ದರು. ಲೆಗ್‌ಸ್ಪಿನ್ನರ್ ಐಪಿಎಲ್‌ನಲ್ಲಿ ಹೆಚ್ಚಿನ ಅವಕಾಶವನ್ನು ಪಡೆಯದಿದ್ದರೂ ಉತ್ತಮ ಪ್ರದರ್ಶನ ನೀಡಿದ್ದಾರೆ. 7.74ರ ಎಕಾನಮಿಯಲ್ಲಿ 14 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ. 30 ವರ್ಷ ವಯಸ್ಸಿನ ಝಂಪಾ 72 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 5/19 ರ ಅತ್ಯುತ್ತಮ ಅಂಕಿಅಂಶವಾಗಿದೆ. 6.93ರ ಎಕಾನಮಿಯಲ್ಲಿ 82 ವಿಕೆಟ್​​ಗಳನ್ನು ಪಡೆದಿದ್ದಾರೆ.

ಕುಲದೀಪ್ ಯಾದವ್ (ದೆಹಲಿ ಕ್ಯಾಪಿಟಲ್ಸ್): 2020 ರ ಋತುವಿನ ಬಹುಪಾಲು ಸಮಯವನ್ನು ಹೊರಗಿದ್ದ ಚೈನಾಮನ್ ಬೌಲರ್ 2022 ಐಪಿಎಲ್​ನಲ್ಲಿ 21 ವಿಕೆಟ್‌ ಪಡೆದರು. 22ರ ಸೀಸನ್​ನಲ್ಲಿ ಮೂರನೇ ಅತ್ಯಧಿಕ ಮತ್ತು ಒಟ್ಟಾರೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡರು.

ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್): ದಕ್ಷಿಣ ಆಫ್ರಿಕಾದ ವೇಗಿ ಐಪಿಎಲ್‌ನಲ್ಲಿ ತಮ್ಮ ಅತ್ಯುತ್ತಮ ಕೌಶಲ್ಯದಿಂದ ಪ್ರದರ್ಶನ ನೀಡಿದ್ದಾರೆ. 2019 ರಲ್ಲಿ ಅವರು 25 ವಿಕೆಟ್​​ಗಳನ್ನು ಪಡೆದಿದ್ದಾರೆ. 2020 ಸೀಸನ್​ನಲ್ಲಿ 30 ವಿಕೆಟ್​​ಗಳನ್ನು ಪಡೆದು ಪರ್ಪಲ್ ಕ್ಯಾಪ್ ಹೊಂದಿದ್ದರು. 2021 ರಲ್ಲಿ ರಬಾಡಾ 15 ವಿಕೆಟ್​ ಪಡೆದರು, ನಂತರ 2022 ರಲ್ಲಿ 23 ವಿಕೆಟ್​ ಪಡೆದಿದ್ದಾರೆ. ಕಳೆದ ಆವೃತ್ತಿಯ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರಬಾಡ (27) 63 ಐಪಿಎಲ್ ಪಂದ್ಯಗಳನ್ನು ಆಡಿದ್ದು, 19.86 ಸರಾಸರಿಯಲ್ಲಿ 99 ವಿಕೆಟ್ ಪಡೆದಿದ್ದಾರೆ. ಇನ್ನೊಂದು ವಿಕೆಟ್ ಪಡೆದರೆ 100 ವಿಕೆಟ್‌ ಪಡೆದ 19 ನೇ ಬೌಲರ್ ಆಗಲಿದ್ದಾರೆ.

ಇದನ್ನೂ ಓದಿ:IPL 2023: ರೋಹಿತ್​ ಪಡೆಗೆ ಆರನೇ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣು

ABOUT THE AUTHOR

...view details