ದುಬೈ:ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಭಾರತ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಬ್ಯಾಟಿಂಗ್ ಪ್ರದರ್ಶನದನ ನಂತರ ಭಾರತ ಆಟಗಾರರು ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ಶತಕ ಗಳಿಸಿ ವಿರಾಟ್ ಮತ್ತು ಆಲ್ರೌಂಡರ್ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ರ್ಯಾಂಕಿಂಗ್ನಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ.
ಅಗ್ರ ಪಟ್ಟದಲ್ಲೇ ಮುಂದುವರಿದ ಅಶ್ವಿನ್:ಭಾರತದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 17.28 ಸರಾಸರಿಯಲ್ಲಿ 25 ವಿಕೆಟ್ಗಳನ್ನು ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾರ್ಚ್ 1 ರಂದು ನವೀಕರಣಗೊಂಡಿದ್ದ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದ ಅಶ್ವಿನ್ ತಮ್ಮ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ ಮತ್ತು ಆಸಿಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕೆ ಮೂರನೇ ಟೆಸ್ಟ್ ಬಳಿಕ ಅಗ್ರಪಟ್ಟಕ್ಕೇರಿದ್ದರು.
ಬ್ಯಾಟಿಂಗ್ ರ್ಯಾಂಕಿಂಗ್:ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 3.5 ವರ್ಷಗಳ ಶತಕದ ಬರವನ್ನು ಪೂರೈಸಿಕೊಂಡ ವಿರಾಟ್ ಶ್ರೇಯಾಂಕದಲ್ಲೂ ಬದಲಾವಣೆಯಾಗಿದೆ. ಮೂರನೇ ಟೆಸ್ಟ್ ನಂತರ 20 ರಲ್ಲಿದ್ದ ವಿರಾಟ್ ಈಗ 13ನೇ ಜಾಗಕ್ಕೆ ಅಂದರೆ 8 ಸ್ಥಾನದ ಏರಿಕೆ ಕಂಡಿದ್ದಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಅದ್ಭುತ 186 ರನ್ ಗಳಿಸಿದ್ದರು. ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ರಿಷಭ್ ಪಂತ್ ಒಂಬತ್ತು ಮತ್ತು ರೋಹಿತ್ ಶರ್ಮಾ 10 ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಇಬ್ಬರೇ ಆಟಗಾರರು ಮಾತ್ರ ಇದ್ದಾರೆ.