ಕರ್ನಾಟಕ

karnataka

ETV Bharat / sports

ಸಮುದ್ರ ತೀರದಲ್ಲಿ ಸಿಕ್ಸ್ ಪ್ಯಾಕ್ ದೇಹದೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು: ವಿಡಿಯೋ ವೈರಲ್ - ಸಿಕ್ಸ್ ಪ್ಯಾಕ್ ದೇಹದೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು

ಸದ್ಯ ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ವಿಶ್ವಕಪ್​​ನ ಕಹಿ ಘಟನೆಗಳನ್ನು ಮೆಟ್ಟಿ ನಿಂತು ಮುಂಬರುವ ಕಿವೀಸ್ ವಿರುದ್ಧದ ಸರಣಿಯನ್ನು ಗೆಲ್ಲುವ ತವಕದಲ್ಲಿದ್ದಾರೆ. ಅದಕ್ಕಾಗಿ ಅವರು ಅಭ್ಯಾಸದಲ್ಲಿ ಮಗ್ನರಾಗಿದ್ದಾರೆ.

Indian players flaunt abs in Wellington ahead of 1st T20I vs NZ
Indian players flaunt abs in Wellington ahead of 1st T20I vs NZ

By

Published : Nov 17, 2022, 1:58 PM IST

ವೆಲ್ಲಿಂಗ್ಟನ್​:ವಿಶ್ವಕಪ್​ ಸೆಮಿಫೈನಲ್​ ಸೋಲಿನ ಬಳಿಕ ಟೀಂ ಇಂಡಿಯಾ ತಂಡ ನ್ಯೂಜಿಲ್ಯಾಂಡ್​​​ ಪ್ರವಾಸ ಕೈಗೊಂಡಿದ್ದು, ನಾಳೆಯಿಂದ ಮೊದಲ ಪಂದ್ಯಕ್ಕೆ ಅಣಿಯಾಗಲಿದೆ. ಕಿವೀಸ್ ವಿರುದ್ಧ ಭಾರತ ಮೂರು ಟಿ-20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು ವಿಶ್ವಕಪ್‌ನ ಕಹಿ ಅನುಭವಗಳನ್ನು ಮೆಟ್ಟಿ ನಿಲ್ಲುವ ಉತ್ಸಾಹದಲ್ಲಿದೆ.

ಈಗಾಗಲೇ ನ್ಯೂಜಿಲ್ಯಾಂಡ್​​ಗೆ ಬಂದಿಳಿದಿರುವ ಟೀಂ ಇಂಡಿಯಾದ ಆಟಗಾರರು ಶುಕ್ರವಾರ ನಡೆಯಲಿರುವ ಮೊದಲ ಟಿ-20 ಸ್ಥಳವಾದ ವೆಲ್ಲಿಂಗ್ಟನ್​​ ಕ್ರಿಕೆಟ್​ ಮೈದಾನದಲ್ಲಿ ಅಭ್ಯಾಸದಲ್ಲಿ ನಡೆಸಿದರು. ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಭಾರತದ ಯುವ ಆಟಗಾರರು ತುಂಬಾ ಚುರುಕಾಗಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು.

ಇದರ ನಡುವೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಕಡಲತೀರದಲ್ಲಿ ಕಳೆದದ್ದು ಕಂಡು ಬಂದಿತು. ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ಉಮ್ರಾನ್ ಮಲಿಕ್ ತಮ್ಮ ಸಿಕ್ಸ್ ಪ್ಯಾಕ್ ತೋರಿಸುತ್ತಾ ಬೀಚ್‌ನಿಂದ ಹೊರ ಬರುತ್ತಿರುವುದನ್ನು ಕಾಣಬಹುದು. ವಾಷಿಂಗ್ಟನ್ ಸುಂದರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ವಿಡಿಯೋ ನೋಡಿದ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಭಾರತೀಯ ಕ್ರಿಕೆಟಿಗರು ನ್ಯೂಜಿಲ್ಯಾಂಡ್​​​​ ವಿರುದ್ಧ ಗೆಲ್ಲಲು ಶ್ರಮಿಸಬೇಕು ಎಂದು ಸಲಹೆ ನೀಡಿದ್ದು ಕಂಡು ಬಂದಿದೆ.

ವೆಲ್ಲಿಂಗ್ಟನ್​ನಲ್ಲಿ ಮೊದಲ ಪಂದ್ಯ ಆತಿಥ್ಯ ವಹಿಸಿಕೊಳ್ಳಲಿದೆ. ಮೂರು ಟಿ-20 ಪಂದ್ಯಗಳ ಬಳಿಕ 3 ಪಂದ್ಯಗಳನ್ನು ಶಿಖರ್​ ಧವನ್ ನೇತೃತ್ವದಲ್ಲಿ​ ಏಕದಿನ ಸರಣಿಯನ್ನಾಡಲಿದೆ. ಸರಣಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹೆಚ್ಚಿನ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ: ಕಿವೀಸ್​ ನೆಲದಲ್ಲಿ ಟಿ20 ಸರಣಿಗೆ ಭಾರತ ಭರ್ಜರಿ ತಾಲೀಮು.. ಅವಕಾಶ ಬಳಸಿಕೊಳ್ತಾರಾ ಕಿರಿಯರು?

ABOUT THE AUTHOR

...view details