ನವದೆಹಲಿ:ಭಾರತದ ವೇಗದ ಬೌಲಿಂಗ್ ದಾಳಿ ನ್ಯೂಜಿಲ್ಯಾಂಡ್ನ ವಿಶ್ವಶ್ರೇಷ್ಠ ಸ್ವಿಂಗ್ ದಾಳಿಗೆ ಸಮಾನವಾಗಿದೆ. ಆದರೆ, ನಾವು ಸ್ಪಿನ್ಬೌಲರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕಿವೀಸ್ ಬ್ಯಾಟ್ಸ್ಮನ್ ಹೆನ್ರಿ ನಿಕೋಲ್ಸ್ ಹೇಳಿದ್ದಾರೆ.
ಸೌತಾಂಪ್ಟನ್ ಏಜಿಯಸ್ ಬೌಲ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನಂಬರ್ 1 ಭಾರತ ತಂಡವನ್ನು ಎದುರಿಸಲಿದೆ. ಇಲ್ಲಿ ವಿಕೆಟ್ ಇಂಗ್ಲೆಂಡ್ನ ಪಿಚ್ಗಳಲ್ಲಿ ಸ್ಲೋ ಬೌಲರ್ಗಳಿಗೆ ನೆರವಾಗು ಬಲು ಅಪರೂಪದ್ದಾಗಿರುವುದರಿಂದ ಭಾರತದ ವೇಗಿಗಳಿಗಿಂತ ಸ್ಪಿನ್ನರ್ಗಳ ಕಡೆಗೆ ನಮ್ಮ ಗಮನವಿದೆ ಎಂದು ನಿಕೋಲ್ಸ್ ತಿಳಿಸಿದ್ದಾರೆ.
ಭಾರತ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ ಮತ್ತು ಜಡೇಜಾ ಮತ್ತು ಅಶ್ವಿನ್ ಅಂತಹ ಅನುಭವಿ ಸ್ಪಿನ್ನರ್ಗಳನ್ನು ಹೊಂದಿದೆ. ಅವರು ವಿಶ್ವದ ಎಲ್ಲ ಭಾಗಗಳಲ್ಲೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಮತ್ತು ಉತ್ತಮ ಗುಣಮಟ್ಟದ ದಾಳಿಯನ್ನು ಹೊರ ಹಾಕಿದ್ದಾರೆ ಎಂದು ಟೆಸ್ಟ್ ಕ್ರಿಕೆಟ್ನಲ್ಲಿ ಕಿವೀಸ್ನ ಬಲವಾಗಿರುವ ನಿಕೋಲ್ಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಕಳೆದ ಕೆಲವು ವರ್ಷಗಳಿಂದ ಅವರ ಗುಣಮಟ್ಟ ಸಾಬೀತು ಪಡಿಸಿದ್ದಾರೆ. ಅವರು ನಾವು ಹೆಮ್ಮಪಡುವ ನಮ್ಮ ವೇಗಿಗಳಾದ ಬೌಲ್ಟ್, ಟಿಮ್ ಸೌಥಿ ಮತ್ತು ನೀಲ್ ವ್ಯಾಗ್ನರ್ಗೆ ಸಮನಾಗಿದ್ದಾರೆ. ನೀವು ಅಂತಹ ಬೌಲಿಂಗ್ ಲೈನ್ ಅಪ್ ಹೊಂದಿದ್ದಾಗ, ಅದೊಂದು ಉತ್ತೇಜಕ ಸವಾಲಾಗಿರಲಿದೆ ಮತ್ತು ಒಂದು ತಂಡವಾಗಿ ಅವರನ್ನು ಎದುರಿಸುವುದು ಕಠಿಣ, ಆದರೆ ಅವರ ಸವಾಲು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
2019-20 ತವರಿನ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-0ಯಲ್ಲಿ ಮಣಿಸಿದ್ದು ನೆರವಾಗಲಿದೆಯಾ ಎಂದು ಕೇಳಿದ್ದಕ್ಕೆ, ನಾವು ಈ ಬಾರಿ ತಟಸ್ಥ ಸ್ಥಳದಲ್ಲಿ ಆಡಲಿದ್ದೇವೆ. ಎರಡೂ ತಂಡಕ್ಕೂ ಸವಾಲಾಗಲಿದೆ. ಆದರೆ, ನಾವು ಅವರನ್ನು 2-0 ಯಲ್ಲಿ ಹಿಂದೆ ಮಣಿಸಿದ್ದೇವೆ. ಅದು ವಿಭಿನ್ನ ವಾದ ಸವಾಲು ಎಂದು ನಾವು ಒಪ್ಪಿಕೊಳ್ಳಬೇಕಿದೆ. ಒಂದು ಗುಂಪಾಗಿ ನಾವು ಆ ಸರಣಿ ಜಯದಿಂದ ಹೆಚ್ಚು ವಿಶ್ವಾಸ ಪಡೆಯಲಿದ್ದೇವೆ. ಮೊದಲೆರಡು ಶ್ರೇಯಾಂಕದ ತಂಡಗಳು ಫೈನಲ್ನಲ್ಲಿ ಆಡಲಿರುವುದರಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧದ ಟೆಸ್ಟ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಸಜ್ಜಾಗಲು ಉತ್ತಮ ವೇದಿಕೆ: ಸೌಥಿ