ಕರ್ನಾಟಕ

karnataka

ETV Bharat / sports

ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್: ದಾಖಲೆ ಸರಿಗಟ್ಟಿದ ವೇಗಿ ಜೂಲನ್ ಗೋಸ್ವಾಮಿ - ಅತಿ ಹೆಚ್ಚು ವಿಕೆಟ್ ಪಡೆದ ಜೂಲನ್ ಗೋಸ್ವಾಮಿ

ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ವಿಶ್ವಕಪ್​ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಜೂಲನ್ ಗೋಸ್ವಾಮಿ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಸರಿಗಟ್ಟಿದ್ದಾರೆ.

Jhulan Goswami record
ಜೂಲನ್ ಗೋಸ್ವಾಮಿ ದಾಖಲೆ

By

Published : Mar 10, 2022, 1:20 PM IST

ಹ್ಯಾಮಿಲ್ಟನ್​: ಭಾರತೀಯ ಮಹಿಳಾ ಕ್ರಿಕೆಟ್​ನ ಲೆಜೆಂಡ್ ಎಂದೇ ಗುರುತಿಸಿಕೊಂಡಿರುವ ಜೂಲನ್ ಗೋಸ್ವಾಮಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಹೊಡೆದುರುಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಹ್ಯಾಮಿಲ್ಟನ್‌ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್​​ನ ಇಂದಿನ ಪಂದ್ಯದಲ್ಲಿ ಭಾರತ - ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಮಿಥಾಲಿ ರಾಜ್ ಪಡೆ ಬೌಲಿಂಗ್​ ಆಯ್ದುಕೊಂಡಿತು. ಈ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಈ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್‍ನ ವಿರುದ್ಧ ಇನಿಂಗ್ಸ್​​ನಲ್ಲಿ ಕೇಟಿ ಮಾರ್ಟಿನ್ ವಿಕೆಟ್ ಪಡೆಯುವುದರ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ 39 ವಿಕೆಟ್ ಪಡೆದ ಸಾಧನೆ ನಿರ್ಮಿಸಿದರು.

ಈ ಸಾಧನೆ ಮೂಲಕ 1982 ರಿಂದ 1988 ರವರೆಗೆ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪಾಕ್​ ತಂಡದ ವಿರುದ್ಧ 26 ರನ್​ ನೀಡಿದ್ದ ಜೂಲನ್ ಗೋಸ್ವಾಮಿ 2 ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ:ಮಹಿಳಾ ಏಕದಿನ ವಿಶ್ವಕಪ್​: ಕಿವೀಸ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮಿಥಾಲಿ ಪಡೆ

ಎರಡು ದಶಕಗಳ ಕಾಲದ ವೃತ್ತಿ ಜೀವನದಲ್ಲಿ, ಅಂದರೆ 2005 ರಿಂದ ಐದು ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಗೋಸ್ವಾಮಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ABOUT THE AUTHOR

...view details