ಕರ್ನಾಟಕ

karnataka

ETV Bharat / sports

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ವಾರ್ವಿಕ್​ಷೈರ್​ ಪರ ಪದಾರ್ಪಣೆ ಮಾಡಿದ ಹನುಮ ವಿಹಾರಿ - ಭಾರತ ತಂಡದ ಆಲ್​ರೌಂಡರ್​ ಹನುಮ ವಿಹಾರಿ

ಗುರುವಾರ ನಾಟಿಂಗ್​ಹ್ಯಾಮ್​ ವಿರುದ್ಧದ ಪಂದ್ಯದಲ್ಲಿ ವಿಹಾರಿ ಪದಾರ್ಪಣೆ ಮಾಡಿದ್ದಾರೆ. ಅವರು ಕಳೆದ ವಾರ ಇಂಗ್ಲೆಂಡ್​ಗೆ ತೆರಳಿದ್ದು, ಒಂದು ವಾರ ಕ್ವಾರಂಟೈನ್ ಮುಗಿಸಿದ್ದರು. ಹಾಗಾಗಿ ಡರ್ಬಿಶೈರ್​ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

ಕೌಂಟಿ ಚಾಂಪಿಯನ್​ಶಿಪ್
ಹನುಮ ವಿಹಾರಿ

By

Published : Apr 15, 2021, 4:31 PM IST

ನಾಟಿಂಗ್​ಹ್ಯಾಮ್​: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಹನುಮ ವಿಹಾರಿ ಗುರುವಾರ ವಾರ್ವಿಕ್​ಷೈರ್​ ಕ್ಲಬ್​ ಪರ ಕೌಂಟಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಗುರುವಾರ ನಾಟಿಂಗ್​ಹ್ಯಾಮ್​ ವಿರುದ್ಧದ ಪಂದ್ಯದಲ್ಲಿ ವಿಹಾರಿ ಪದಾರ್ಪಣೆ ಮಾಡಿದ್ದಾರೆ. ಅವರು ಕಳೆದ ವಾರ ಇಂಗ್ಲೆಂಡ್​ಗೆ ತೆರಳಿದ್ದು, ಒಂದು ವಾರ ಕ್ವಾರಂಟೈನ್ ಮುಗಿಸಿದ್ದರು. ಹಾಗಾಗಿ ಡರ್ಬಿಶೈರ್​ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

ವಿಸಾ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾದ ಪೀಟರ್​ ಮಲನ್ ಈ ವರ್ಷದ ಕೌಂಟಿ ಚಾಂಪಿಯನ್​ಶಿಪ್​ನಿಂದ ಹೊರಗುಳಿದಿದ್ದರಿಂದ ವಾರ್ವಿಕ್​ಷೈರ್​ ತಂಡ ವಿಹಾರಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

27 ವರ್ಷದ ವಿಹಾರಿ ಭಾರತದ ಪರ 12 ಟೆಸ್ಟ್​ ಪಂದ್ಯಗಳಿಂದ ಒಂದು ಶತಕ ಸೇರಿದಂತೆ 32ರ ಸರಾಸರಿಯಲ್ಲಿ 624 ರನ್​ ಗಳಿಸಿದ್ದಾರೆ. ವಿಹಾರಿ 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 7000ಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ. ಬೌಲಿಂಗ್​ನಲ್ಲೂ 24 ವಿಕೆಟ್ ಪಡೆದಿದ್ದಾರೆ.

ಇದನ್ನು ಓದಿ:ಡೆಲ್ಲಿ vs ರಾಜಸ್ಥಾನ್: ಯುವ ನಾಯಕರ ಕಾಳಗದಲ್ಲಿ ಗೆಲ್ಲುವವರ‍್ಯಾರು?

ABOUT THE AUTHOR

...view details