ಮುಂಬೈ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೋಚ್ ರವಿಶಾಸ್ತ್ರಿ ಸೋಮವಾರ ಮುಂಬೈನಲ್ಲಿ ಇಂಗ್ಲೆಂಡ್ ಬೌಂಡ್ ತಂಡವನ್ನು ಸೇರಿಕೊಂಡಿದ್ದು, ಮಹಿಳಾ ತಂಡದ ಜೊತೆಗೆ ಇಂದಿನಿಂದ 8 ದಿನಗಳ ಕಾಲ ಕಠಿಣ ಕ್ವಾರಂಟೈನ್ ಆರಂಭಿಸಿದ್ದಾರೆ.
ಭಾರತ ಮಹಿಳಾ ತಂಡವೂ ಕೂಡ ಜೂನ್ 2ರಂದು ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಗ್ರ್ಯಾಂಡ್ ಹ್ಯಾಟ್ ಹೋಟೆಲ್ನಲ್ಲಿ 8 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಜೂನ್ 2ರಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಆಟಗಾರರು ಮತ್ತು ಎಲ್ಲಾ ಸಿಬ್ಬಂದಿ 3 ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಪಡೆಯಬೇಕಿರುತ್ತದೆ.
ಭಾರತ ಪುರುಷ ತಂಡ ಇಂಗ್ಲೆಂಡ್ ಪ್ರವಾಸದ ಜೂನ್ 18ರಿಂದ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಮಹಿಳಾ ತಂಡ ಈ ಪ್ರವಾಸದಲ್ಲಿ ಒಂದು ಟೆಸ್ಟ್, 3 ಏಕದಿನ ಮತ್ತು ಟಿ-20 ಪಂದ್ಯಗಳನ್ನಾಡಲಿದೆ. ಜೂನ್ 16ರಿಂದ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನು ಓದಿ:ಕೊಹ್ಲಿ, ರೋಹಿತ್ ಅಲ್ಲ, ಈತ ಭಾರತದ ಅಪಾಯಕಾರಿ - ಗೇಮ್ ಚೇಂಜರ್ ಬ್ಯಾಟ್ಸ್ಮನ್: ಕಿವೀಸ್ ಕೋಚ್