ಮುಂಬೈ (ಮಹಾರಾಷ್ಟ್ರ):ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಸೋಲು ಭಾರತೀಯ ಕ್ರೀಡಾಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಸಮತೋಲಿತ ತಂಡ ಮತ್ತು ಆಲ್ರೌಂಡರ್ಗಳ ಕೊರತೆಯಿಂದಾಗಿ ಈ ಫಲಿತಾಂಶ ಬಂದಿದೆ ಎಂಬ ವಿಶ್ಲೇಷಣೆ ಶುರುವಾಗಿದೆ. ಹಿರಿಯ ಆಟಗಾರರು ಕೂಡ ತಂಡದ ಆಯ್ಕೆ ಬಗ್ಗೆ ಚಕಾರ ಎತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ನಾಯಕನ ಬದಲಾವಣೆಗೆ ಸೂಚಿಸಿದ್ದಾರೆ. ನಾನು ಆಯ್ಕೆ ಮಂಡಳಿ ಮುಖ್ಯಸ್ಥನಾಗಿದ್ದರೆ, ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್ ಮಾಡುವೆ ಎಂದಿದ್ದಾರೆ. ಈ ಬಗ್ಗೆ ಕ್ರಿಕೆಟ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿರುವ ಶ್ರೀಕಾಂತ್, ವಿಶ್ವಕಪ್ಗೆ 2 ವರ್ಷಗಳ ಹಿಂದಿನಿಂದಲೇ ತಯಾರಿ ನಡೆಸಬೇಕಾಗುತ್ತದೆ.
ತಂಡದಲ್ಲಿ ವೇಗದ ಬೌಲಿಂಗ್ ಮಾಡುವ ಆಲ್ರೌಂಡರ್ಗಳ ಕೊರತೆಯಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ನಾಯಕರಾಗಿದ್ದಾರೆ. ಅವರನ್ನೇ ಭಾರತ ತಂಡದ ಕ್ಯಾಪ್ಟನ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ನಾನು ಮುಖ್ಯಸ್ಥನಾಗಿದ್ದರೆ ಹಾರ್ದಿಕ್ ನಾಯಕ ಮಾಡ್ತಿದ್ದೆ:ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ಹಾರ್ದಿಕ್ ಪಾಂಡ್ಯರನ್ನು 2024 ರ ವಿಶ್ವಕಪ್ನ ನಾಯಕನನ್ನಾಗಿ ನೇರವಾಗಿ ಘೋಷಣೆ ಮಾಡುತ್ತಿದ್ದೆ. ಇಂದಿನಿಂದಲೇ ತಂಡವನ್ನು ಬಲಿಷ್ಠವಾಗಿ ಕಟ್ಟಬೇಕಿದೆ. ಶುರುವಾಗಲಿರುವ ನ್ಯೂಜಿಲ್ಯಾಂಡ್ ಸರಣಿಯಿಂದಲೇ ತಂಡದ ಬಲ ಪರೀಕ್ಷೆ ನಡೆಸಬೇಕು. ಮುಂದಿನ ವರ್ಷದ ವೇಳೆಗೆ ತಂಡದ ಗುಣಮಟ್ಟ ಸಾಬೀತಾಗಬೇಕು. ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.