ಕರ್ನಾಟಕ

karnataka

ETV Bharat / sports

ಭಾರತೀಯ ಜರ್ಸಿ ತೊಟ್ಟು ಮೈದಾನಕ್ಕಿಳಿದು ಅವಾಂತರ ಸೃಷ್ಟಿಸಿದ ಇಂಗ್ಲೀಷ್​ ಅಭಿಮಾನಿ - English fan enter the field

ಮೊಹಮ್ಮದ್ ಸಿರಾಜ್​ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋವ್(57) ಔಟಾಗುತ್ತಿದ್ದಂತೆ ಮೈದಾನಕ್ಕೆ ಬಂದ ವ್ಯಕ್ತಿ ಭಾರತೀಯ ಆಟಗಾರರೊಂದಿಗೆ ಸೇರಿಕೊಂಡಿದ್ದಾನೆ. ತಕ್ಷಣ ಮೈದಾನದ ಸಿಬ್ಬಂದಿ ಹೊರ ಹೋಗುವಂತೆ ಸೂಚಿಸಿದರೆ, ಆತನ ಬಿಸಿಸಿಐ ಲೋಗೋ ತೋರಿಸಿ ನಾನು ಭಾರತ ತಂಡದ ಆಟಗಾರ ಎಂದು ತೋರಿಸಿದ್ದಾನೆ.

ಮೈದಾನಕ್ಕೆ ನುಗ್ಗಿದ ಇಂಗ್ಲೀಷ್ ಅಭಿಮಾನಿ
ಮೈದಾನಕ್ಕೆ ನುಗ್ಗಿದ ಇಂಗ್ಲೀಷ್ ಅಭಿಮಾನಿ

By

Published : Aug 14, 2021, 7:29 PM IST

Updated : Aug 28, 2021, 5:02 PM IST

ಲಂಡನ್​: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದ ವೇಳೆ ಭಾರತದ ಟೆಸ್ಟ್ ಜರ್ಸಿ ತೊಟ್ಟ ಇಂಗ್ಲೀಷ್​ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಗೊಂದಲ ಮೂಡಿಸಿದ ಘಟನೆ ನಡೆದಿದೆ.

ಮೊಹಮ್ಮದ್ ಸಿರಾಜ್​ ಬೌಲಿಂಗ್​ನಲ್ಲಿ ಜಾನಿ ಬೈರ್​ಸ್ಟೋವ್(57) ಔಟಾಗುತ್ತಿದ್ದಂತೆ ಮೈದಾನಕ್ಕೆ ಬಂದ ವ್ಯಕ್ತಿ ಭಾರತೀಯ ಆಟಗಾರರೊಂದಿಗೆ ಸೇರಿಕೊಂಡಿದ್ದಾನೆ. ತಕ್ಷಣ ಮೈದಾನದ ಸಿಬ್ಬಂದಿ ಹೊರ ಹೋಗುವಂತೆ ಸೂಚಿಸಿದರೆ, ಆತನ ಬಿಸಿಸಿಐ ಲೋಗೋ ತೋರಿಸಿ ನಾನು ಭಾರತ ತಂಡದ ಆಟಗಾರ ಎಂದು ತೋರಿಸಿದ್ದಾನೆ.

69 ಜರ್ಸಿ ನಂಬರ್​ ಮತ್ತು ಜಾರ್ವೋ ಎಂಬ ಹೆಸರಿನ ಜರ್ಸಿ ತೊಟ್ಟಿದ್ದ ವ್ಯಕ್ತಿ ಮೈದಾನದಲ್ಲಿ ಕಾಣಿಸಿಕೊಂಡು ಗೊಂದಲ ಮೂಡಿಸಿದ್ದಾನೆ. ಕೊನೆಗೆ ಮೈದಾನದ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ಘಟನೆಯನ್ನು ನೋಡಿ ಪಕ್ಕದಲ್ಲಿದ್ದ ಮೊಹಮ್ಮದ್ ಸಿರಾಜ್, ಜಡೇಜಾ ಹಾಗೂ ವೀಕ್ಷಕ ವಿವರಣೆಗಾರರು ಬಿದ್ದು, ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.

ಇಂಗ್ಲೆಂಡ್ ತಂಡ 3ನೇ ದಿನ 119ರನ್​ಗಳಿಂದ ಬ್ಯಾಟಿಂಗ್ ಆರಂಭಿಸಿತ್ತು. ಪ್ರಸ್ತುತ 256 ರನ್​ಗಳಿಸಿದೆ. ನಾಯಕ ಜೋ ರೂಟ್​ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮ 22ನೇ ಶತಕ ಪೂರ್ಣಗೊಳಿಸಿದ್ದು, ಅಜೇಯರಾಗಿ ಮುನ್ನುಗ್ಗುತ್ತಿದ್ದಾರೆ.

ಇದನ್ನು ಓದಿ:ತಂಡದಿಂದ ಕೈಬಿಟ್ಟ ನೋವನ್ನೇ ಇಂಧನವಾಗಿಸಿಕೊಂಡು ಕನ್ನಡಿಗ ಕೆ ಎಲ್‌ ರಾಹುಲ್​ ಭರ್ಜರಿ ಕಮ್​ಬ್ಯಾಕ್

Last Updated : Aug 28, 2021, 5:02 PM IST

ABOUT THE AUTHOR

...view details