ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುವ ದೇಶೀ ಕ್ರಿಕೆಟ್ನಲ್ಲಿ ಆಡಲು ಬಿಸಿಸಿಐ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಭಾರತದ ಅನೇಕ ಆಟಗಾರರು ಈ ವರ್ಷ ಆಂಗ್ಲರ ನಾಡಿಗೆ ತೆರಳುತ್ತಿದ್ದಾರೆ. ಈ ಸಾಲಿಗೆ ಉಮೇಶ್ ಯಾದವ್ ಸಹ ಸೇರಿಕೊಂಡಿದ್ದಾರೆ. ಉಮೇಶ್ ಯಾದವ್ ಕೌಂಟಿ ಕ್ರಿಕೆಟ್ಗೆ ತೆರಳಿದ 6ನೇ ಆಟಗಾರ. ಎಸೆಕ್ಸ್ ಪರ ಕೊನೆಯ ಮೂರು ಪಂದ್ಯಗಳನ್ನು ಆಡಲು ಇವರು ಒಪ್ಪಿಕೊಂಡಿದ್ದಾರೆ. ಎಸೆಕ್ಸ್ ಪರ ಮಿಡ್ಲ್‌ಸೆಕ್ಸ್, ಹ್ಯಾಂಪ್‌ಶೈರ್ ಮತ್ತು ನಾರ್ಥಾಂಪ್ಟನ್‌ಶೈರ್ ವಿರುದ್ಧದ ಪಂದ್ಯಗಳನ್ನು ಯಾದವ್ ಆಡಲಿದ್ದಾರೆ. ಇದರಲ್ಲಿ ಎರಡು ತವರು ಮೈದಾನದಲ್ಲಿ ನಡೆದರೆ ಮತ್ತೊಂದು ಪಂದ್ಯ ಹೊರಗೆ ನಡೆಯಲಿದೆ.
ಎಸೆಕ್ಸ್ ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿ ಇರುವಾಗ ನ್ಯೂಜಿಲೆಂಡ್ ವೇಗಿ ಡೌಗ್ ಬ್ರೇಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಬದಲಿ ಆಟಗಾರನಾಗಿ ಉಮೇಶ್ ಎಸೆಕ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ಎಸೆಕ್ಸ್ ತಂಡದ ಮೂರನೇ ವಿದೇಶಿ ಆಟಗಾರ ಉಮೇಶ್ ಯಾದವ್ ಆಗಿದ್ದಾರೆ. ಬ್ರೇಸ್‌ವೆಲ್ ಮತ್ತು ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್ ತಂಡದಲ್ಲಿ ಈ ಹಿಂದೆ ಆಡಿದ್ದರು. ಉಮೇಶ್ ಯಾದವ್ ಅವರಿಗೆ ಕೌಂಟಿಯಲ್ಲಿ ಆಡಿದ ಅನುಭವವಿದೆದೆ. ಕಳೆದ ವರ್ಷ ಉಮೇಶ್ ಮಿಡ್ಲ್‌ಸೆಕ್ಸ್‌ನೊಂದಿಗೆ ಡಿವಿಷನ್ ಎರಡರಲ್ಲಿ ಮೊದಲ ಬಾರಿಗೆ ಆಡಿದ್ದರು. 71.50 ಸರಾಸರಿಯಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು.
ಈ ಬಗ್ಗೆ ಮಾತನಾಡಿರುವ ಉಮೇಶ್ ಯಾದವ್, "ಎಸ್ಸೆಕ್ಸ್‌ಗೆ ಸೇರಿರುವುದು ನಿಜವಾಗಿಯೂ ಸಂತೋಷವಾಗಿದೆ. ಈ ವರ್ಷ ತಂಡದ ಯಶಸ್ಸಿಗೆ ಕೆಲವು ಮೌಲ್ಯಯುತ ಕೊಡುಗೆ ನೀಡಲು ಬಯಸುತ್ತೇನೆ. ಕಳೆದ ಋತುವಿನಲ್ಲಿ ಮಿಡ್ಲ್‌ಸೆಕ್ಸ್ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಈಗ ಮತ್ತೆ ಅದೇ ಪರಿಸ್ಥಿತಿಯಲ್ಲಿ ಆಡುಲು ಉತ್ಸುಕನಾಗಿದ್ದೇನೆ. ಪಂದ್ಯದ ಪ್ರಮುಖ ಘಟ್ಟದಲ್ಲಿ ತಂಡ ಸೇರುತ್ತಿರುವುದು ಇನ್ನೂ ಕುತೂಹಲ ಹೆಚ್ಚಿಸಿದೆ" ಎಂದರು. ಭಾರತ ತಂಡದಲ್ಲಿ ಉಮೇಶ್ ಯಾದವ್ 57 ಟೆಸ್ಟ್, 75 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದು, 288 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.