ಸೌತಾಂಪ್ಟನ್: ಭಾರತ - ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಆರನೇ ದಿನದಾಟ ನಡೆಯುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಪಡೆ 170 ರನ್ಗಳಿಗೆ ಸರ್ವಪತನಗೊಂಡಿದ್ದು, ಎದುರಾಳಿ ತಂಡಕ್ಕೆ 139 ರನ್ಗಳ ಸಾಧಾರಣ ಗುರಿ ನೀಡಿದೆ.
ನಿನ್ನೆ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು ಬ್ಯಾಟಿಂಗ್ ಮುಂದುವರೆಸಿತು. ಆದರೆ, ನ್ಯೂಜಿಲ್ಯಾಂಡ್ ಬೌಲಿಂಗ್ ದಾಳಿಗೆ ತತ್ತರಿಸಿ ಮೇಲಿಂದ ಮೇಲೆ ವಿಕೆಟ್ ಕಳೆದು ಕೊಂಡಿತ್ತು. ವಿರಾಟ್, ಪೂಜಾರಾ ವಿಕೆಟ್ ಪತನಗೊಳ್ಳುತ್ತಿದ್ದಂತೆ ಒದಾದ ಪಂತ್ ಹಾಗೂ ರಹಾನೆ ತಂಡಕ್ಕೆ ಆಸರೆಯಾಗಿದ್ದರು.