ಎಡ್ಜ್‌ಬಾಸ್ಟನ್:ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆತಿಥೇಯರು ಗೆಲುವಿನ ಸಮೀಪದಲ್ಲಿದ್ದಾರೆ. ಮೂರನೇ ದಿನದಾಟದ ವೇಳೆ ಮೈದಾನದಲ್ಲಿ ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ ಮತ್ತು ವಿರಾಟ್ ಕೊಹ್ಲಿ ಕಿತ್ತಾಡಿಕೊಂಡಿದ್ದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಗಳ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದು, 10 ತಮ್ಮನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನಿಖೆ ನಡೆಸಿ, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪ ಕೇಳಿ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಜನಾಂಗೀಯ ನಿಂದನೆ ಆರೋಪದ ಬಗ್ಗೆ ಕಳವಳಗೊಂಡಿದ್ದೇವೆ. ಈ ರೀತಿಯ ನಡವಳಿಕೆಗೆ ನಮ್ಮಲ್ಲಿ ಜಾಗವಿಲ್ಲ. ಅತ್ಯಂತ ಸುರಕ್ಷಿತ ವಾತಾವರಣಕ್ಕಾಗಿ ಎಡ್ಜ್‌ಬಾಸ್ಟನ್ ಕೆಲಸ ಮಾಡಲಿದೆ ಎಂದು ತಿಳಿಸಿದೆ.