ಸಿಡ್ನಿ(ಆಸ್ಟ್ರೇಲಿಯಾ) : ಭಾರತ ಪಾಕಿಸ್ತಾನದ ಎದುರು ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಜೊತೆ ಮುಖಾಮುಖಿಯಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ನೆಟ್ ಪ್ರಾಕ್ಟಿಸ್ನಲ್ಲಿ ತೊಡಗಿಸಿಕೊಂಡಿದೆ. ನಿನ್ನೆ ನೆಟ್ ಅಭ್ಯಾಸದ ನಂತರ ನೀಡಿದ ಆಹಾರದ ಬಗ್ಗೆ ತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನೆಟ್ ಪ್ರಾಕ್ಟಿಸ್ ನಂತರ ಮೈದಾನದಲ್ಲಿದ್ದ ಆಟಗಾರರಿಗೆ ಆಸ್ಟ್ರೇಲಿಯಾದ ಆಹಾರ ಸಂಸ್ಕೃತಿಯಾದ ಹಣ್ಣು, ಫಲಾಫೆಲ್ ಮತ್ತು ಸ್ಯಾಂಡ್‌ವಿಚ್ ನೀಡಲಾಗಿತ್ತು. ಈ ಆಹಾರಕ್ಕೆ ಬೇಸರಗೊಂಡ ಆಟಗಾರರು ಹೋಟೆಲ್ಗೆ ತೆರಳಿ ಊಟ ಮಾಡಿದ್ದಾರೆ. ಅಭ್ಯಾಸದ ನಂತರ ಆಟಗಾರರು ಊಟದ ನಿರೀಕ್ಷೆಯಲ್ಲಿದ್ದರು. ಆದರೆ, ಸ್ಥಳೀಯ ಆಹಾರಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.