ಕರ್ನಾಟಕ

karnataka

ETV Bharat / sports

ಈ ಕ್ರಿಕೆಟರ್ ಜೊತೆ ನಿಶ್ಚಿತಾರ್ಥಕ್ಕೆ ಸಜ್ಜಾದ ಟೀಂ ಇಂಡಿಯಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ - ಈಟಿವಿ ಭಾರತ ಕರ್ನಾಟಕ

ಟೀಂ ಇಂಡಿಯಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಮುಂದಿನ ವಾರ ನಿಶ್ಚಿತಾರ್ಥ ನಡೆಯಲಿವೆ.

Indian cricketer Veda Krishnamurthy
Indian cricketer Veda Krishnamurthy

By

Published : Sep 12, 2022, 1:55 PM IST

ಬೆಂಗಳೂರು: ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ಕರ್ನಾಟಕದ ಕ್ರಿಕೆಟ್​ ಆಟಗಾರನೊಂದಿಗೆ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಇನ್​​ಸ್ಟಾಗ್ರಾಂ​​ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ಮಹಿಳಾ ತಂಡದಿಂದ ದೂರ ಉಳಿದಿರುವ ವೇದಾ, ಈ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದಾರೆ.

ಸೆಪ್ಟೆಂಬರ್​ 18ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಎರಡು ಕುಟುಂಬದ ಸದಸ್ಯರು ಹಾಗೂ ಕೆಲ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆಂದು ವರದಿಯಾಗಿದೆ.

ಟೀಂ ಇಂಡಿಯಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ಅವರೊಂದಿಗೆ ಸಪ್ತಪದಿ ತುಳಿಯಲಿರುವ ಅರ್ಜುನ್ ಹೂಯ್ಸಳ ಕೂಡ ಕ್ರಿಕೆಟಿಗರಾಗಿದ್ದಾರೆ. ಈಗಾಗಲೇ ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ಮಿಂಚು ಹರಿಸಿದ್ದಾರೆ. 2016ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿರುವ ಅರ್ಜುನ್​ ಅನೇಕ ಪಂದ್ಯಗಳಲ್ಲಿ ಮಿಂಚು ಹರಿಸಿದ್ದಾರೆ. ಆದರೆ, ಐಪಿಎಲ್ ಹಾಗೂ ರಾಷ್ಟ್ರೀಯ ತಂಡಕ್ಕೆ ಮಾತ್ರ ಅವಕಾಶ ಪಡೆದುಕೊಂಡಿಲ್ಲ.

ಇದನ್ನೂ ಓದಿ:ಹೊಯ್ಸಳ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ

ಇನ್ನು, ವೇದಾ ಕೃಷ್ಣಮೂರ್ತಿ 18ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು, ಇಲ್ಲಿಯವರೆಗೆ ಭಾರತದ ಪರ 48 ODI ಮತ್ತು 76 T20 ಪಂದ್ಯಗಳನ್ನು ಆಡಿದ್ದಾರೆ. 2017ರ ಏಕದಿನ ವಿಶ್ವಕಪ್ ಹಾಗೂ 2020ರ ಟಿ20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಕೋವಿಡ್​ ಸಂದರ್ಭದಲ್ಲಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಹಾಗೂ ಸಹೋದರಿ ಸೋಂಕಿಗೆ ಬಲಿಯಾಗಿದ್ದರು.

ವೇದಾ ಕೃಷ್ಣಮೂರ್ತಿ ಅವರಿಗೆ ಕರ್ನಾಟಕ ಕ್ರಿಕೆಟಿಗ ಅರ್ಜುನ್​ ಹೊಯ್ಸಳ ಪ್ರೇಮ ನಿವೇದನೆ ಮಾಡ್ತಿರುವ ಫೋಟೋ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಈ ವಿಷಯ ಖಚಿತಪಡಿಸಲಾಗಿದೆ. ಫೋಟೋ ವೈರಲ್​ ಆಗ್ತಿದ್ದಂತೆ ನೆಟ್ಟಿಗರು ಶುಭಾಯಶಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. 29 ವರ್ಷದ ವೇದಾ ಮೂಲತಃ ಕರ್ನಾಟಕದವರಾಗಿದ್ದು, 32 ವರ್ಷದ ಅರ್ಜುನ್ ಕೂಡ ಕರುನಾಡಿನವರಾಗಿದ್ದಾರೆ.

ABOUT THE AUTHOR

...view details