ನವದೆಹಲಿ:ಕನ್ನಡಿಗ ರಾಬಿನ್ ಉತ್ತಪ್ಪ ಎಲ್ಲ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. "ಎಲ್ಲ ಒಳ್ಳೆಯ ಸಂಗತಿಗಳು ಅಂತ್ಯ ಕಾಣಲೇಬೇಕು. ನನ್ನ ಕ್ರಿಕೆಟ್ ಜರ್ನಿಯನ್ನೂ ಇಂದಿಗೆ ಮುಗಿಸಲಿದ್ದೇನೆ. ಎಲ್ಲ ಕ್ರಿಕೆಟ್ ಮಾದರಿಗೆ ವಿದಾಯ ಹೇಳುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
2006 ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಉತ್ತಪ್ಪ, 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ ತಂಡದಲ್ಲಿದ್ದರು. ಈ ಪಾಕಿಸ್ತಾನ ವಿರುದ್ಧದ ಪಂದ್ಯ ಡ್ರಾ ಆದಾಗ ಬೌಲ್ ಔಟ್ನಲ್ಲಿ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಜೊತೆಗೆ ರಾಬಿತ್ ಉತ್ತಪ್ಪ ವಿಕೆಟ್ ಉರುಳಿಸಿ ಪಂದ್ಯ ಗೆಲ್ಲುವಂತೆ ಮಾಡಿದ್ದು ಅಭಿಮಾನಿಗಳ ಸ್ಮರಣೆಯಲ್ಲಿದೆ.
ಭಾರತ ಅಂತಾರಾಷ್ಟ್ರೀಯ ತಂಡದಲ್ಲಿ ಕೆಲವೇ ಪಂದ್ಯಗಳಾಡಿರುವ ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಪರ 46 ಏಕದಿನ ಪಂದ್ಯಗಳಲ್ಲಿ 934 ರನ್ ಗಳಿಸಿದ್ದಾರೆ. 13 ಟಿ-20 ಪಂದ್ಯಗಳಲ್ಲಿ 249 ರನ್ ಮಾತ್ರ ಕಲೆ ಹಾಕಿದ್ದಾರೆ. 2015 ರಿಂದ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ರಾಬಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಓರ್ವ ಪುತ್ರನಿದ್ದಾನೆ. ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು.