ನವದೆಹಲಿ:ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್ ಸಮರಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಈ ಮಧ್ಯೆಯೇ ತಂಡದ ಹೊಸ ಜರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದೆ.
ಮಿಂಚುತ್ತಿದೆ ಭಾರತದ ಹೊಸ ಜರ್ಸಿ:ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಬಿಸಿಸಿಐ ಭಾನುವಾರ ಅನಾವರಣಗೊಳಿತು. ಭಾರತ ತಂಡದ ಹೊಸ ಜೆರ್ಸಿ ಸಂಪೂರ್ಣವಾಗಿ ಆಕಾಶ ನೀಲಿಯಿಂದ ಕೂಡಿದ್ದು, ತೋಳಿನ ಭಾಗದಲ್ಲಿ ಮಾತ್ರ ಗಾಢ ನೀಲಿಯಲ್ಲಿದೆ. ಜೆರ್ಸಿ ಪ್ರಾಯೋಜಕತ್ವ ಪಡೆದಿರುವ ಎಂಪಿಎಲ್ ಜೆರ್ಸಿಯ ಬಲಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಾಣಬಹುದು.
ಹಳೆಯದಕ್ಕಿಂತ ಭಿನ್ನ ಹೊಸ ಜರ್ಸಿ:ಟೀಂ ಇಂಡಿಯಾದ ಹಳೆ ಜರ್ಸಿಗೂ ಹೊಸ ಜರ್ಸಿಗೂ ತುಂಬಾ ವ್ಯತ್ಯಾಸವಿದೆ. ಈ ಹಿಂದಿನ ಜರ್ಸಿ ಸಂಪೂರ್ಣವಾಗಿ ಗಾಢ ನೀಲಿಯಿಂದ ಕೂಡಿದ್ದರೆ, ಇದು ಆಕಾಶ ನೀಲಿಯಿಂದ ರೂಪಿಸಲಾಗಿದೆ. ತೋಳಿನ ಭಾಗವನ್ನು ಮಾತ್ರ ಗಾಢ ನೀಲಿಯಲ್ಲಿ ಉಳಿಸಿಕೊಳ್ಳಲಾಗಿದೆ.