ಕರ್ನಾಟಕ

karnataka

ETV Bharat / sports

ನೀವೊಬ್ಬ ಫೈಟರ್​.. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುತ್ತೀರಿ.. ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ನುಡಿ - ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ

ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ಮಾತು- ಕ್ರಿಕೆಟಿಗರ ಭಾವನಾತ್ಮಕ ವಿಡಿಯೋ ಬಿಡುಗಡೆ ಮಾಡಿದ ಬಿಸಿಸಿಐ- ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಕ್ರಿಕೆಟಿಗರು

Indian cricket team coach Rahul Dravid  Hardik Pandya message for Rishabh Pant  Rishabh Pant injured in accident  Rishabh Pant news  ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ಮಾತು  ಕ್ರಿಕೆಟಿಗರ ಭಾವನಾತ್ಮಕ ವಿಡಿಯೋ ಬಿಡುಗಡೆ  ಬೇಗ ಗುಣಮುಖರಾಗಲಿ ಎಂದು ಆಶೀಸಿದ ಕ್ರಿಕೆಟಿಗರು  ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್  ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ  ಪಂತ್ ನರ್ಸನ್ ಗಡಿಯ ಬಳಿ ಭೀಕರ ರಸ್ತೆ ಅಪಘಾತ
ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ಮಾತು

By

Published : Jan 3, 2023, 6:40 PM IST

Updated : Jan 3, 2023, 7:01 PM IST

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸ್ಟಾರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಎಲ್ಲಾ ಖ್ಯಾತ ಕ್ರಿಕೆಟಿಗರು ಹಾರೈಸಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮತ್ತು ಸ್ಟಾರ್ ಕ್ರಿಕೆಟಿಗರು ಪಂತ್ ಬಗ್ಗೆ ಮಾತನಾಡಿರುವ ಭಾವನಾತ್ಮಕ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಚಹಾಲ್, ಇಶಾನ್ ಕಿಶನ್, ಶುಭಮನ್ ಗಿಲ್ ಸೇರಿದಂತೆ ಅನೇಕ ಕ್ರಿಕೆಟಿಗರು ಪಂತ್​ಗೆ ವಿಡಿಯೋ ಕಳುಹಿಸುವ ಮೂಲಕ ಬೇಗ ಚೇತರಿಸಿಕೊಂಡು ಮತ್ತೆ ಆಟ ಆರಂಭಿಸಲಿ ಎಂದು ಧೈರ್ಯ ತುಂಬುತ್ತಿದ್ದಾರೆ.

ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ಮಾತು

‘ರಿಷಬ್, ನೀವು ಚೆನ್ನಾಗಿದ್ದೀರೆಂದು ನಾನು ಭಾವಿಸುತ್ತೇನೆ. ನೀವು ಬೇಗ ಗುಣಮುಖರಾಗಬೇಕು. ಕಳೆದ ವರ್ಷ ಭಾರತದ ಟೆಸ್ಟ್ ಇತಿಹಾಸದಲ್ಲಿ ನೀವು ಆಡಿದ ಕೆಲವು ಶ್ರೇಷ್ಠ ಇನ್ನಿಂಗ್ಸ್‌ಗಳಿಗೆ ಸಾಕ್ಷಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಭಾರತವು ಪ್ರತಿ ಬಾರಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದಾಗ ನೀವು ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದೀರಿ. ನೀವು ಒಬ್ಬ ಹೋರಾಟಗಾರರು.. ನೀವು ಮೊದಲಿನಂತೆ ಹಿಂತಿರುಗುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ದ್ರಾವಿಡ್ ಹೇಳಿದರು.

''ಹಾಯ್ ರಿಷಬ್, ನೀವು ಬೇಗ ಗುಣಮುಖರಾಗಲಿ ಎಂದು ನಾನು ಆಶೀಸುತ್ತೇನೆ. ಇದೀಗ ನೀವು ಇಷ್ಟಪಡುವ ರೀತಿಯಲ್ಲಿ ಯಾವುದೇ ವಿಷಯಗಳಿಲ್ಲ. ಜೀವನ ಅಂದ್ರೆ ಅದೇ.. ಆದರೆ, ನೀನೊಬ್ಬ ಹೋರಾಟಗಾರ. ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ನೀವು ಎಲ್ಲಾ ಬಾಗಿಲುಗಳನ್ನು ಮುರಿದು ಹಿಂತಿರುಗಿ ಬರುತ್ತೀರಿ. ನನ್ನ ಪ್ರೀತಿ ಮತ್ತು ಅಭಿಮಾನ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ನಮ್ಮ ತಂಡ ಮತ್ತು ಇಡೀ ದೇಶ ನಿಮ್ಮ ಬೆನ್ನಿಗಿದೆ,’’ ಎಂದು ಹಾರ್ದಿಕ್​ ಪಾಂಡ್ಯ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಸೂರ್ಯಕುಮಾರ್ ಮಾತನಾಡಿ..''ನೀವು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ನೀವು ಈಗ ಅನುಭವಿಸುತ್ತಿರುವ ನೋವು ನನಗೆ ತಿಳಿದಿದೆ. ನಾವು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಯಾವಾಗಲೂ ಕ್ಷೇತ್ರದಲ್ಲಿ ಹೋರಾಟಗಾರರಾಗಿರುತ್ತೀರಿ. ನೀವು ಬೇಗ ಗುಣಮುಖರಾಗಿ ಬರುವುದು ಖಚಿತ,’’ ಎಂದು ಹೇಳಿದರು.

ಬೇಗ ಗುಣಮುಖರಾಗಿ, ಒಟ್ಟಿಗೆ ಬೌಂಡರಿ ಹಾಗೂ ಸಿಕ್ಸರ್ ಬಾರಿಸೋಣ ಎಂದು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಹೇಳಿದ್ರೆ, "ನೀವು ಬೇಗ ಗುಣಮುಖರಾಗಬೇಕು. ನಿಮ್ಮ ಆಗಮನಕ್ಕಾಗಿ ನಾವು ಕಾಯುತ್ತಿದ್ದೇವೆ. ನಮ್ಮ ಪ್ರೀತಿ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಹೇಳಿದ್ದಾರೆ.

ಪ್ರಸ್ತುತ ಪಂತ್ ಅವರ ಆರೋಗ್ಯ ಸ್ಥಿರವಾಗಿದೆ. ಸೋಂಕು ಹರಡದಂತೆ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸೋಂಕಿನ ಅಪಾಯದ ಕಾರಣ ಸಂಬಂಧಿಕರು ಮತ್ತು ಸೆಲೆಬ್ರಿಟಿಗಳಿಗೆ ಪಂತ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಸೋಮವಾರ ಹೇಳಿದ್ದಾರೆ.

ಹೊಸ ವರ್ಷದ ದಿನದಂದು ಕುಟುಂಬ ಸದಸ್ಯರಿಗೆ ಸರ್ಪ್ರೈಸ್ ನೀಡಲು ಇತ್ತೀಚೆಗೆ ರೂರ್ಕಿಯಿಂದ ಹೊರಟಿದ್ದ ಪಂತ್ ನರ್ಸನ್ ಗಡಿಯ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿರುವ ವಿಷಯ ಗೊತ್ತೇ ಇದೆ.. ಈಗ ಪಂತ್​ ಆರೋಗ್ಯದಲ್ಲಿ ಚೇತರಿಕೆ ಮೂಡಿದ್ದು, ಅನೇಕ ಕ್ರಿಕೆಟಿಗರು ಮತ್ತು ಗಣ್ಯರು ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಓದಿ:ಬಿಗ್​ ತ್ರೀ ಇಲ್ಲದೇ ಪಾಂಡ್ಯಗೆ ಜವಾಬ್ದಾರಿ.. ನವ ನಾಯಕನ ಕೈಚಳಕದಲ್ಲಿ ಟಿ20 ಪಡೆ

Last Updated : Jan 3, 2023, 7:01 PM IST

ABOUT THE AUTHOR

...view details