ಕೊಲಂಬೊ: ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ಶಿಖರ್ ಧವನ್, ಈ ಪ್ರವಾಸದಲ್ಲಿ ತಂಡದ ಎಲ್ಲಾ ಆಟಗಾರರನ್ನು ಒಗ್ಗಟ್ಟಾಗಿರುವಂತೆ ಮತ್ತು ಖುಷಿಯಿಂದಿರುವಂತೆ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಭಾರತ ತಂಡದ ಪರ ನಾಯಕನಾಗಿರುವುದು ನನ್ನ ವೃತ್ತಿ ಜೀವನದ ದೊಡ್ಡ ಸಾಧನೆ. ನಾನೊಬ್ಬ ನಾಯಕನಾಗಿ ತಂಡದಲ್ಲಿರುವ ಪ್ರತಿಯೊಬ್ಬರನ್ನು ಒಗ್ಗಟ್ಟಾಗಿರುವಂತೆ ಮತ್ತು ಸಂತೋಷದಿಂದಿರುವಂತೆ ನೋಡಿಕೊಳ್ಳುವುದು ನನ್ನ ಯೋಜನೆ. ಅದು ಅತಿ ಪ್ರಮುಖ ವಿಷಯವೂ ಹೌದು. ನಾವು ಒಳ್ಳೆಯ ಹುಡುಗರ ತಂಡ ಮತ್ತು ಅದ್ಭುತ ಕೋಚಿಂಗ್ ಸಿಬ್ಬಂದಿ ಹೊಂದಿದ್ದೇವೆ. ಅಲ್ಲದೆ ನಾವೆಲ್ಲಾ ಈ ಹಿಂದೆಯೂ ಒಟ್ಟಿಗೆ ಕೆಲಸ ಮಾಡಿದ್ದೇವೆ.
ನಾನು ಭಾರತ ಎ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಅಲ್ಲದೆ ಎನ್ಸಿಎಗೆ ಸಾಕಷ್ಟು ಬಾರಿ ಹೋಗಿರುವುದರಿಂದ ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಆದ್ದರಿಂದ ನಾವು ಉತ್ತಮ ಸಾಮರ್ಥ್ಯವನ್ನು ಹೊಂದಿದ್ದು, ಅದನ್ನು ಮೈದಾನದಲ್ಲಿ ಆಡುವಾಗ ನೀವು ನೋಡಬಹುದಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಧವನ್ ಹೇಳಿಕೊಂಡಿದ್ದಾರೆ.