ನವದೆಹಲಿ :ಟೀಂ ಇಂಡಿಯಾ ಕ್ರಿಕೆಟ್ನ ಆಲ್ರೌಂಡರ್ ಅಕ್ಸರ್ ಪಟೇಲ್ ಹುಟ್ಟುಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ತಮ್ಮ ಬಹುದಿನದ ಗೆಳತಿ ಮೇಹಾ ಜೊತೆ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮೇಹಾ ನವದೆಹಲಿಯಲ್ಲಿ ವಾಸವಾಗಿದ್ದು, ಆಹಾರ ತಜ್ಞೆ ಮತ್ತು ಪೌಷ್ಟಿಕತಜ್ಞೆಯಾಗಿದ್ದಾರೆ.
ಜನವರಿ 20ರಂದು 28ನೇ ವಸಂತಕ್ಕೆ ಕಾಲಿಟ್ಟಿರುವ ಅಕ್ಸರ್ ಪಟೇಲ್, ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದು ನನ್ನ ಜೀವನದ ಹೊಸ ಆರಂಭ. ಶಾಶ್ವತವಾಗಿ ಒಟ್ಟಿಗೆ ಜೀವನ ನಡೆಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅನೇಕರು ವಿಶ್ ಮಾಡಿದ್ದು, ಪ್ರಮುಖವಾಗಿ ರಿಷಬ್ ಪಂತ್, ಉಮೇಶ್ ಯಾದವ್, ಉನದ್ಕತ್ ಮತ್ತು ಇಶನ್ ಕಿಶನ್ ಅಭಿನಂದಿಸಿದ್ದಾರೆ.