ನವದೆಹಲಿ: ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಅಗ್ರ ಸ್ಥಾನಕ್ಕೇರಿದ್ದಾರೆ. ನಂಬರ್ 1 ಸ್ಥಾನಕ್ಕೆ ಏರಿದ ನಾಲ್ಕನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡಲ್ಕೂರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಂತರ ಗಿಲ್ ಈ ಸಾಧನೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ, ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಮತ್ತೆ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.
ನಡೆಯುತ್ತಿರುವ ಏಕದಿನ ವಿಶ್ವಕಪ್ ಉತ್ತಮ ಪ್ರದರ್ಶನ ನೀಡುತ್ತಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪಾಕಿಸ್ತಾನಿ ನಾಯಕನನ್ನು ಕಳೆಕ್ಕೆ ತಳ್ಳಿ ಅಗ್ರಪಟ್ಟವನ್ನು ಅಲಂಕರಿಸಿದ್ದಾರೆ. 830 ರೇಟಿಂಗ್ ಪಡೆದಿರುವ ಗಿಲ್ ನಂ.1 ಆದರೆ 824 ರೇಟಿಂಗ್ನಿಂದ ಬಾಬರ್ ಅಜಮ್ ಕುಸಿತ ಅನುಭವಿಸಿದರು. 2023ರ ವಿಶ್ವಕಪ್ನಲ್ಲಿ ಬಾಬರ್ ಬ್ಯಾಟ್ನಿಂದ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಇದು ಅವರ ರೇಟಿಂಗ್ಗೆ ಹೊಡೆತವನ್ನು ಕೊಟ್ಟಿತು. ಟೀಮ್ ಇಂಡಿಯಾದಲ್ಲಿ ಶುಭಮನ್ ಗಿಲ್ ಅವರನ್ನು ಪ್ರಿನ್ಸ್ ಎಂದೇ ಕರೆಯಲಾಗುತ್ತದೆ. ವಿರಾಟ್ ಕಿಂಗ್ ಆದರೆ, ಗಿಲ್ ಪ್ರಿನ್ಸ್. ಈಗ ವಿರಾಟ್ ನಂತರ ಆ ಸ್ಥಾನ್ಕಕೆ ಏರಿ ತಮಗೆ ಸಿಕ್ಕ ಬಿರುದನ್ನು ಸಾಬೀತು ಮಾಡಿದ್ದಾರೆ ಶುಭಮನ್.
ಗಿಲ್ ಜ್ವರದ ಕಾರಣ ಮೊದಲೆರಡು ವಿಶ್ವಕಪ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ನಂತರ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದರು. ಬಾಂಗ್ಲಾದೇಶದ ವಿರುದ್ಧ 53, ಶ್ರೀಲಂಕಾ ವಿರುದ್ಧ 92, ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 23 ರನ್ ಗಳಿಸಿದ್ದು, ಅವರ ಶ್ರೇಯಾಂಕದ ಏರಿಕೆಗೆ ಕಾರಣವಾಗಿದೆ. ವಿಶ್ವಕಪ್ನಲ್ಲಿ ಒಟ್ಟಾರೆ ಅವರೀಗ 219 ರನ್ ಗಳಿಸಿದ್ದಾರೆ.