ದುಬೈ:ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದ ಬಳಿಕ ಬ್ಯಾಟಿಂಗ್, ಬೌಲಿಂಗ್ ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ನಡೆದ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.
ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 2 ವಿಕೆಟ್ಗೆ 212 ರನ್ ಗಳಿಸಿದರೆ, ಅಫ್ಘಾನಿಸ್ತಾನ 8 ವಿಕೆಟ್ಗೆ 111 ರನ್ ಗಳಿಸಿ ಸೋಲು ಕಂಡಿತು. ಉಭಯ ತಂಡಗಳಿಗೂ ಔಪಚಾರಿಕವಾಗಿದ್ದ ಪಂದ್ಯದಲ್ಲಿ ಭಾರತ ಗೆದ್ದು ಅಭಿಯಾನವನ್ನು ಅಂತ್ಯಗೊಳಿಸಿತು.
ಝದರ್ನ್ ಏಕಾಂಗಿ ಹೋರಾಟ:ಅಫ್ಘಾನಿಸ್ತಾನ ಪರ ಇಬ್ರಾಹಿಂ ಝದರ್ನ್ ಏಕಾಂಗಿ ಹೋರಾಟ ನಡೆಸಿದರು. ಇಡೀ ತಂಡ 50 ರನ್ ಗಳಿಸಿಲು ಪರದಾಡಿದರೆ, ಝದರ್ನ್ ಒಬ್ಬರೇ 64 ರನ್ ಬಾರಿಸಿದರು. ಕೊನೆಯಲ್ಲಿ ರಶೀದ್ ಖಾನ್ 15, ಮುಜೀಬವ್ ಉರ್ ರೆಹಮಾನ್ 18 ರನ್ ಗಳಿಸಿದರು. ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡ ಆಫ್ಘನ್ 20 ಓವರ್ಗಳಲ್ಲಿ 8 ವಿಕೆಟ್ಗೆ 111 ಗಳಿಸಿ ಸೋಲೊಪ್ಪಿಕೊಂಡಿತು.
ಮಿಂಚಿದ ಭುವಿ:ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ವೈಫಲ್ಯ ಅನುಭವಿಸಿ ಭಾರೀ ಟೀಕೆಗೆ ಗುರಿಯಾಗಿದ್ದ ಭುವನೇಶ್ವರ್ ಕುಮಾರ್ 5 ವಿಕೆಟ್ ಕಿತ್ತು ಮಿಂಚಿದರು.
ಭಾರತದ ಇನಿಂಗ್ಸ್: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 20 ಓವರ್ಗಳಲ್ಲಿ 212 ರನ್ ಬಾರಿಸಿತು. ವಿರಾಟ್ ರೂಪ ತೋರಿದ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಬಾರಿಸಿದರು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಆರಂಭಿಕನಾಗಿ ನಾಯಕ ಕೆ ಎಲ್ ರಾಹುಲ್ ಜೊತೆ ಕಣಕ್ಕಿಳಿದ ವಿರಾಟ್ ಮೊದಲ ವಿಕೆಟ್ಗೆ 119 ರನ್ ಪೇರಿಸಿದರು.
ಈ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ ಕೆ ಎಲ್ ರಾಹುಲ್ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದರು. 41 ಎಸೆತಗಳಲ್ಲಿ 62 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 6 ಗಳಿಸಿ ಔಟಾದರೆ, ರಿಷಭ್ ಪಂತ್ 20 ರನ್ ಗಳಿಸಿದರು. ಇನ್ನು ಆಫ್ಘನ್ ಬೌಲಿಂಗ್ ಪಡೆ ಸಂಪೂರ್ಣವಾಗಿ ನೆಲಕಚ್ಚಿತು. ಫರೀದ್ ಅಹ್ಮದ್ 4 ಓವರ್ಗಳಲ್ಲಿ 57 ರನ್ ಚಚ್ಚಿಸಿಕೊಂಡು 2 ವಿಕೆಟ್ ಮಾತ್ರ ಕಿತ್ತರು.
ಓದಿ:1024 ದಿನಗಳ ಬಳಿಕ ವಿರಾಟ್ ಕೊಹ್ಲಿ ಶತಕ: ಭಾರತ 2 ವಿಕೆಟ್ಗೆ 212 ರನ್