ಕರ್ನಾಟಕ

karnataka

ETV Bharat / sports

15 ವರ್ಷದ ಬಳಿಕ  ಏಕಮಾತ್ರ ಟೆಸ್ಟ್​​​​ಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ - ಕ್ರಿಕೆಟ್ ಆಸ್ಟ್ರೇಲಿಯಾ

ಮಹಿಳಾ ತಂಡವು 2006ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಮಿತಾಲಿ ರಾಜ್​ ನಾಯಕತ್ವದ ತಂಡ 4-0 ಅಂತರದಲ್ಲಿ ಟೆಸ್ಟ್ ಸರಣಿ ಸೋಲುಕಂಡಿತ್ತು.

ಭಾರತ ಮಹಿಳಾ ಕ್ರಿಕೆಟ್​ ತಂಡ
ಭಾರತ ಮಹಿಳಾ ಕ್ರಿಕೆಟ್​ ತಂಡ

By

Published : May 18, 2021, 9:21 PM IST

Updated : May 18, 2021, 9:31 PM IST

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್​​ ತಂಡವು 15 ವರ್ಷಗಳ ಬಳಿಕ ಏಕ ಮಾತ್ರ ಟೆಸ್ಟ್​​​ಗಾಗಿ ಹಾಗೂ ವೈಟ್ ಬಾಲ್​ ಸಿರೀಸ್​​ಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದೆ. ಒಂದು ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಸೆಪ್ಟೆಂಬರ್​​ನಲ್ಲಿ ತೆರಳಲಿದೆ.

ಆದರೆ, ಈ ಪ್ರವಾಸದ ಕುರಿತು ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಗಳು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಆದರೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಮೇಗನ್ ಸ್ಕುಟ್​​, ‘ನೋ ಬಾಲ್ಸ್ ದಿ ಕ್ರಿಕೆಟ್ ಪಾಡ್​ಕಾಸ್ಟ್’ ಎಂಬ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿದ್ದಾರೆ.

ಭಾರತ ತಂಡ ತವರಿಗೆ ಆಗಮಿಸಲಿದೆ. ಒಂದು ಟೆಸ್ಟ್ ಹಾಗೂ ಏಕದಿನ ಸರಣಿ ಆಡಲಿದ್ದು, ಅಭ್ಯಾಸ ಪಂದ್ಯವನ್ನೂ ಆಡಲಿದೆ ಎಂಬ ಸುಳಿವು ನೀಡಿದ್ದಾರೆ.

ಮಹಿಳಾ ತಂಡವು 2006ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ವೇಳೆ ಮಿತಾಲಿ ರಾಜ್​ ನಾಯಕತ್ವದ ತಂಡ 4-0 ಅಂತರದಲ್ಲಿ ಟೆಸ್ಟ್ ಸರಣಿ ಸೋಲುಕಂಡಿತ್ತು. 9 ಪಂದ್ಯದಲ್ಲಿ 4ರಲ್ಲಿ ಸೋತು, 5 ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು.

Last Updated : May 18, 2021, 9:31 PM IST

ABOUT THE AUTHOR

...view details