ದಕ್ಷಿಣ ಆಫ್ರಿಕಾ: ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಡಕ್ವರ್ತ್ ಲೂಯಿಸ್ (DLS) ನಿಯಮದಡಿ ಭಾರತ ತಂಡ 5 ರನ್ಗಳಿಂದ ಜಯಗಳಿಸುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು.
ಭಾರತ ಇನ್ನಿಂಗ್ಸ್: ಓಪನರ್ ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್ ತೋರದಿದ್ದರೂ 24 ರನ್ ಬಾರಿಸಿದರು. ಇನ್ನೊಂದೆಡೆ, ಸ್ಮೃತಿ ಮಂಧಾನ ಬಿರುಸಿನ ಆಟವಾಡಿ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸುವ ಮೂಲಕ 87 ರನ್ಗಳನ್ನು ಕಲೆ ಹಾಕಿದರು. ಈ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನುಳಿದಂತೆ, ನಾಯಕಿ ಹರ್ಮನ್ 13 ಹಾಗೂ ಜೆಮಿಮಾ ರೋಡ್ರಿಗಸ್ 12 ಎಸೆತಗಳಲ್ಲಿ 19 ರನ್ ಸೇರಿಸಿದರು. ಅಂತಿಮವಾಗಿ ಭಾರತ ವನಿತೆಯರ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತು. ಐರ್ಲೆಂಡ್ ಪರ ಲಾರಾ ಡೆಲಾನಿ 3 ಹಾಗೂ ಓರ್ಲಾ ಪ್ರೆಂಡರ್‌ಗಾಸ್ಟ್ 2 ವಿಕೆಟ್ ಪಡೆದರು.