ಕರ್ನಾಟಕ

karnataka

ETV Bharat / sports

BANW vs INDW: ಹರ್ಮನ್​ಪ್ರೀತ್​​ ಅರ್ಧಶತಕ.. ಮೊದಲ ಟಿ20ಯಲ್ಲಿ ಬಾಂಗ್ಲಾ ವನಿತೆಯರನ್ನು ಮಣಿಸಿದ ಭಾರತ - ETV Bharath Kannada news

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯ ದಾಖಲಿಸಿದ್ದಾರೆ.

India Women won 1st T20 against Bangladesh Women vs
India Women won 1st T20 against Bangladesh Women vs

By

Published : Jul 9, 2023, 5:26 PM IST

ಢಾಕಾ (ಬಾಂಗ್ಲಾದೇಶ):ಬಾಂಗ್ಲಾದೇಶ ಪ್ರವಾಸದಲ್ಲಿರುವ ಭಾರತದ ವನಿತೆಯರ ಕ್ರಿಕೆಟ್​ ತಂಡ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರ ಅರ್ಧ ಶತಕದ ನೆರವಿನಿಂದ ಮೊದಲ ಟಿ 20 ಪಂದ್ಯವನ್ನು ಗೆದ್ದುಕೊಂಡಿದೆ. ಶೇರ್-ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನೀಡಿದ್ದ 114 ರನ್​ನ​ ಸುಲಭ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 3.4 ಓವರ್​ ಮತ್ತು 7 ವಿಕೆಟ್​ನಿಂದ ಭಾರತ ಗೆದ್ದುಕೊಂಡಿದೆ.

ಭಾರತದ ನಾಯಕಿ ಹರ್ಮನ್​ಪ್ರೀತ್​ ಕೌರ್​​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ವನಿತೆಯರ ತಂಡ ಶಥಿ ರಾಣಿ (22), ಸೋಭಾನಾ ಮೊಸ್ಟಾರಿ (23) ಮತ್ತು ಶೋರ್ನಾ ಅಕ್ಟರ್ (28) ಅವರ ರನ್​ ಸಹಾಯದಿಂದ ನಿಗದಿತ ಓವರ್​ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 114 ರನ್ ಗಳಿಸಿತು.

ಇದನ್ನು ಬೆನ್ನತ್ತಿದ ಭಾರತಕ್ಕೆ ಮೂರನೇ ಬಾಲ್​ನಲ್ಲೇ ಆರಂಭಿಕ ಆಘಾತ ಎದುರಾಯಿತು. ಶೆಫಾಲಿ ವರ್ಮಾ ಮೂರನೇ ಬಾಲ್​ಗೆ ಎಲ್​ಬಿಡಬ್ಲ್ಯುಗೆ ಬಲಿಯಾದರು. ನಂತರ ಬಂದ ಜೆಮಿಕಾ ರೋಡ್ರಿಗಸ್​ ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗೆ ಉತ್ತಮ ಜೊತೆಯಾಟ ಆಡಿದರು.

ಈ ಜೋಡಿ ಎರಡನೇ ವಿಕೆಟ್​ 21 ರನ್​ ಕಲೆ ಹಾಕಿತು. ಈ ವೇಳೆ 11 ರನ್​ ಗಳಿಸಿ ಆಡುತ್ತಿದ್ದ ಜೆಮಿಕಾ ವಿಕೆಟ್​ ಒಪ್ಪಿಸಿದರು. ನಂತರ ತಂಡವನ್ನು ನಾಯಕಿ ಹರ್ಮನ್​ಪ್ರೀತ್​ ಕೌರ್​ ಮತ್ತು ಉಪನಾಯಕಿ ಮಂಧಾನ ಮುನ್ನಡೆಸಿದರು. ನಾಯಕಿ ಮತ್ತು ಉಪನಾಯಕಿ ಸೇರಿಕೊಂಡು 70 ರನ್​ ಬೃಹತ್​ ಜೊತೆಯಾಟ ಆಡಿದರು. ಇದರಿಂದ ತಂಡ ಗೆಲುವಿನ ಸನಿಹಕ್ಕೆ ತಲುಪಿತು. ಗೆಲುವಿಗೆ 23 ರನ್​ ಬಾಕಿ ಇರುವಾಗ ಸ್ಮೃತಿ ಮಂಧಾನ ಸ್ಟಂಪ್​ ಔಟ್​ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್​ನಲ್ಲಿ 34 ಬಾಲ್​ನಲ್ಲಿ 5 ಬೌಂಡರಿಯಿಂದ 38 ರನ್​ ಗಳಿಸಿದರು.

ಕೊನೆಯಲ್ಲಿ ನಾಯಕಿ ಕೌರ್​ ವಿಕೆಟ್​ ಕೀಪರ್​ ಯಾಸ್ತಿಕಾ ಭಾಟಿಯಾ ಜೊತೆಗೆ ಸೇರಿ ಪಂದ್ಯವನ್ನು ಗೆಲ್ಲಿಸಿದರು. ಕೌರ್​ 35 ಬಾಲ್​ ಎದುರಿಸಿ ಎರಡು ಸಿಕ್ಸ್​​ ಮತ್ತು 6 ಬೌಂಡರಿಯಿಂದ 54 ರನ್​ ಗಳಿಸಿ ಅಜೇಯರಾಗಿ ಉಳಿದರು. ಅವರ ಜೊತೆ ಯಾಸ್ತಿಕಾ ಭಾಟಿಕಾಯಾ 12 ಬಾಲ್​ನಲ್ಲಿ 9 ರನ್ ​ಗಳಿಸಿ ಅಜೇಯಾರಾಗಿ ಉಳಿದರು. ಕೌರ್​ ಮತ್ತು ಮಂಧಾನ ಇನ್ನಿಂಗ್ಸ್​​ ಸಹಾಯದಿಂದ ಭಾರತ 7 ವಿಕೆಟ್​ಗಳ ಜಯ ದಾಖಲಿಸಿತು. ಅರ್ಧಶತಕ ಗಳಿಸಿ ಗೆಲುವಿಗೆ ಕಾರಣರಾದ ನಾಯಕಿ ಕೌರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಿನ್ನು ಮಣಿ, ಅನುಷಾ ಬಾರೆಡ್ಡಿ ಪಾದಾರ್ಪಣೆ: ಭಾರತವು ಆಲ್‌ರೌಂಡರ್ ಮಿನ್ನು ಮಣಿ ಮತ್ತು ಎಡಗೈ ಸ್ಪಿನ್ನರ್ ಅನುಷಾ ಬಾರೆಡ್ಡಿ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಂಡಿತು. ಇದು ಇವರ ಚೊಚ್ಚಲ ಪಂದ್ಯವಾಗಿದೆ. ನಾಯಕಿ ಮತ್ತು ಉಪನಾಯಕಿ ಕ್ಯಾಪ್​ ಕೊಟ್ಟು ಇಬ್ಬರನ್ನು ತಂಡಕ್ಕೆ ಸ್ವಾಗತಿಸಿದರು. ಆಲ್‌ರೌಂಡರ್ ಮಿನ್ನು ಮಣಿ ಚೊಚ್ಚಲ ಪಂದ್ಯದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ವಿಕೆಟ್​ ಪಡೆದು ಮಿಂಚಿದರು. ಬಾಂಗ್ಲಾದೇಶ ಬಲಗೈ ಬ್ಯಾಟರ್ ಶಾಥಿ ರಾಣಿ ಅವರ ಕ್ಯಾಪ್​ ಕೊಟ್ಟು ಚೊಚ್ಚಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಿತು.

ಇದನ್ನೂ ಓದಿ:Maharaja Trophy: ಮಹಾರಾಜ ಟ್ರೋಫಿಗೆ ಸೇರಿದ ಶಿವಮೊಗ್ಗ, ಮಂಗಳೂರು ತಂಡ.. ಆಗಸ್ಟ್​ನಲ್ಲಿ ಎರಡನೇ ಆವೃತ್ತಿ ಆರಂಭ

ABOUT THE AUTHOR

...view details