ಮುಂಬೈ(ಮಹಾರಾಷ್ಟ್ರ): ಶಫಾಲಿ ವರ್ಮಾ ಅವರ ಅರ್ಧಶತಕ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಇನ್ನಿಂಗ್ಸ್ ಆಂಗ್ಲ ವನಿತೆಯ ಬೌಲಿಂಗ್ನ ಎದುರು ಗೆಲುವಿಗೆ ಸಹಕಾರಿ ಆಗಲಿಲ್ಲ. ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 20 ಓವರ್ಗೆ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಸರಣಿಯ ಮೊದಲ ಪಂದ್ಯವನ್ನು 38 ರನ್ಗಳಿಂದ ತಂಡ ಕಳೆದುಕೊಂಡಿತು.
ಇಂಗ್ಲೆಂಡ್ ವನಿತೆಯರು ನೀಡಿದ್ದ 198 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಭಾರತ ಸ್ಮೃತಿ ಮಂಧಾನ ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಇದರಿಂದ ಪವರ್ ಪ್ಲೇ ವೇಳೆಗೆ ಜೊತೆಯಾಟ ಬಾರದೇ ದೊಡ್ಡ ಗುರಿ ಬೇಧಿಸುವಲ್ಲಿ ರನ್ ಕೊರತೆ ಎದುರಾಯಿತು. ರನ್ರೇಟ್ ಒತ್ತಡ ಒಂದೆಡೆ ಹೆಚ್ಚಾದರೆ, ಇತ್ತ ಆಂಗ್ಲ ಬೌಲರ್ಗಳ ಎಸೆತಗಳಿಗೆ ದೊಡ್ಡ ಹೊಡೆತ ಹೊಡೆಯಲು ಸಾಧ್ಯವಾಗಲಿಲ್ಲ.
ಶಫಾಲಿ ಅರ್ಧಶತಕ: ನಾಯಕಿ ಕೌರ್ ಮತ್ತು ಶಫಾಲಿ ವರ್ಮಾ 3ನೇ ವಿಕೆಟ್ಗೆ 40 ರನ್‌ಗಳ ಜೊತೆಯಾಟ ಮಾಡಿದರು. ಆದರೆ ರನ್ ಗತಿ ಹೆಚ್ಚಿಸುವಲ್ಲಿ ಎಡವಿದರು. ಇದು ತಂಡದ ಒತ್ತಡವನ್ನು ಹೆಚ್ಚು ಮಾಡಿತು. ಹರ್ಮನ್‌ಪ್ರೀತ್ ಜೊತೆಗೆ 40 ಮತ್ತು ರಿಚಾ ಘೋಷ್ ಜೊತೆಗೆ 40 ರನ್‌ಗಳ ಪಾಲುದಾರಿಕೆ ಮಾಡಿದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅರ್ಧಶತಕ ಮಾಡಿಕೊಂಡರು. ಈ ನಡುವೆ ಕೌರ್ 26 ಮತ್ತು ಘೋಷ್ 21 ರನ್ ಗಳಿಸಿ ಔಟ್ ಆಗಿದ್ದರು. ಶಫಾಲಿ 42 ಬಾಲ್ನಲ್ಲಿ 9 ಬೌಂಡರಿ ಸಹಾಯದಿಂದ 52 ರನ್ ಗಳಿಸಿದರು.