ಹೋವ್(ಇಂಗ್ಲೆಂಡ್):ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ಮಹಿಳಾ ತಂಡಕ್ಕೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ಹಾಕಿ ಐಸಿಸಿ ಆದೇಶ ಹೊರಹಾಕಿದೆ.
ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ವನಿತೆಯರು 8 ರನ್ಗಳ ರೋಚಕ ಗೆಲುವು ದಾಖಲು ಮಾಡಿದ್ದರು. ಆದರೆ ಈ ವೇಳೆ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಹರ್ಮನ್ ಪ್ರೀತ್ ಕೌರ್ ಬಳಗಕ್ಕೆ ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆ ಪ್ರಕಾರ ಪಂದ್ಯ ನಡೆದ ಸಂದರ್ಭದಲ್ಲಿ ತಂಡಕ್ಕೆ ನೀಡಿರುವ ಸಮಯದೊಳಗೆ ಓವರ್ ಮುಕ್ತಾಯಗೊಳಿಸಬೇಕು. ಇದರಲ್ಲಿ ವಿಫಲರಾದರೆ ದಂಡ ವಿಧಿಸಲಾಗುತ್ತದೆ.